'ಅಕ್ರಮ': ರಾಜ್ಯಸಭಾ ಮಾರ್ಷಲ್‍ ಗಳ ಸಮವಸ್ತ್ರಕ್ಕೆ ಮಾಜಿ ಸೇನಾ ಮುಖ್ಯಸ್ಥ ವೇದ್ ಮಲಿಕ್ ವಿರೋಧ

Update: 2019-11-19 06:46 GMT

ಹೊಸದಿಲ್ಲಿ, ನ.19: ರಾಜ್ಯಸಭಾ ಮಾರ್ಷಲ್‍ ಗಳ ಹೊಸ ಸಮವಸ್ತ್ರಕ್ಕೆ  ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವೇದ್ ಮಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ, ಅದನ್ನು `ಅಕ್ರಮ' ಹಾಗೂ  `ಭದ್ರತೆಗೆ ಅಪಾಯ' ಎಂದು ಬಣ್ಣಿಸಿದ್ದಾರೆ.

ಹಿಂದೆ ಬೇಸಿಗೆ ತಿಂಗಳುಗಳಲ್ಲಿ ಸಫಾರಿ ಸೂಟ್ ಹಾಗೂ ಭಾರತೀಯ ಬಂದ್ಗಲಾ ಧರಿಸುತ್ತಿದ್ದ ಮಾರ್ಷಲ್‍ ಗಳು ಚಳಿಗಾಲದಲ್ಲಿ ಪೇಟ ಧರಿಸುತ್ತಿದ್ದರು. ಆದರೆ ಈಗ ಕ್ಯಾಪ್ ಸಹಿತ ಮಿಲಿಟರಿ ಮಾದರಿಯ ಸಮವಸ್ತ್ರ  ಅವರಿಗೆ ಒದಗಿಸಲಾಗಿದೆ.

ಹೊಸ ಸಮವಸ್ತ್ರಕ್ಕೆ ತಮ್ಮ ಅಸಮ್ಮತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ ವೇದ್ ಮಲಿಕ್, ತಮ್ಮ ಟ್ವೀಟ್ ನೊಂದಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಟ್ಯಾಗ್ ಮಾಡಿದ್ದಾರೆ ಹಾಗೂ ರಕ್ಷಣಾ ಸಚಿವರು ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸಿದ್ದಾರೆ.

ರಾಜ್ಯಸಭೆ ತನ್ನ 250ನೇ ಅಧಿವೇಶವನ್ನು ಸೋಮವಾರ ಆರಂಭಿಸುವಾಗ ಮಾರ್ಷಲ್‍ ಗಳ ಸಮವಸ್ತ್ರ ಬದಲಾವಣೆ ಎಲ್ಲರಿಗೂ ಅಚ್ಚರಿ ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News