ಇಂತಹ ತಪ್ಪು ಆಡಳಿತಾತ್ಮಕ ವಲಯಕ್ಕೆ ಸಂಬಂಧಿಸಿದ್ದು: ಸಚಿವ ಜಿತೇಂದ್ರ ಸಿಂಗ್

Update: 2019-11-20 15:41 GMT
Getty file photo

 ಹೊಸದಿಲ್ಲಿ, ನ. 20: ಕೂಡಂಕುಳಂ ಅಣು ವಿದ್ಯುತ್ ಸ್ಥಾವರಕ್ಕೆ ಸೈಬರ್ ದಾಳಿ ವರದಿ ನಡುವೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇಂತಹ ತಪ್ಪು ಸಂಭವಿಸಿದ್ದರೂ ಅದು ಆಡಳಿತಾತ್ಮಕ ವಲಯಕ್ಕೆ ಸೀಮಿತವಾಗಿದೆ ಎಂದು ಬುಧವಾರ ಹೇಳಿದ್ದಾರೆ.

  ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೂಡಂಕುಳಂ ಅಣು ವಿದ್ಯುತ್ ಸ್ಥಾವರಕ್ಕೆ ಇತ್ತೀಚೆಗೆ ನಡೆದ ಸೈಬರ್ ದಾಳಿ ಕುರಿತ ಪ್ರಶ್ನೆಗೆ ಜಿತೇಂದ್ರ ಸಿಂಗ್ ಈ ಪ್ರತಿಕ್ರಿಯೆ ನೀಡಿದರು.

ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಸ್ಥಾವರದ ಒಂದು ಕಂಪ್ಯೂಟರ್ ‘ಮಾಲ್‌ವೇರ್’ ದಾಳಿಗೆ ಒಳಗಾಗಿದೆ. ಆದರೆ, ಸ್ಥಾವರದ ಕಂಪ್ಯೂಟರ್ ವ್ಯವಸ್ಥೆಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಇತ್ತೀಚೆಗೆ ಹೇಳಿತ್ತು.

‘‘ಸದಸ್ಯರ ಕಾಳಜಿ ತುಂಬಾ ಮುಖ್ಯವಾದುದು. ಇಲಾಖೆ ಒಪ್ಪಿಕೊಂಡಿರುವುದನ್ನು ನಾನು ನಿರಾಕರಿಸಲಾರೆ. ಸೈಬರ್ ದಾಳಿ ನಿಭಾಯಿಸಲು ಭದ್ರತಾ ವ್ಯವಸ್ಥೆ ಇದೆ’’ ಎಂದು ಜಿತೇಂದ್ರ ಸಿಂಗ್ ಹೇಳಿದರು.

ಅಣು ವಿದ್ಯುತ್ ಸ್ಥಾವರದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಅಲ್ಲದೆ ಅಣು ವಿದ್ಯುತ್ ಸ್ಥಾವರದಿಂದ ವಿಕಿರಣದ ಯಾವುದೇ ಅಪಾಯ ಇಲ್ಲ ಎಂದು ಅವರು ತಿಳಿಸಿದರು.

 ಕೆಲವು ದೇಶಗಳಲ್ಲಿ ಮುಖ್ಯವಾಗಿ ಫ್ರಾನ್ಸ್‌ನಲ್ಲಿ ಅಣು ವಿದ್ಯುತ್ ಸ್ಥಾವರಗಳು ವಸತಿ ಪ್ರದೇಶಗಳಲ್ಲಿ ಇವೆ. ಈ ಸ್ಥಾವರಗಳು ಸುರಕ್ಷತೆಯ ಕಠಿಣ ಕ್ರಮಗಳನ್ನು ಅನುಸರಿಸುತ್ತವೆ ಹಾಗೂ ಸ್ಥಾವರವನ್ನು ದಿನನಿತ್ಯ ಪರಿಶೀಲನೆ ನಡೆಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News