ಆಗಸ್ಟ್-ನವೆಂಬರ್‌ನಲ್ಲಿ 9 ದೇಶಗಳಿಗೆ ಭೇಟಿ ನೀಡಿದ್ದ ಮೋದಿ

Update: 2019-11-20 16:13 GMT

ಹೊಸದಿಲ್ಲಿ, ನ.20: ಈ ವರ್ಷದ ನವೆಂಬರ್‌ನಿಂದ ಆಗಸ್ಟ್ ತಿಂಗಳವರೆಗೆ ಪ್ರಧಾನಿ ನರೇಂದ್ರ ಮೋದಿ ಏಳು ಬಾರಿ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, 9 ದೇಶಗಳಿಗೆ ಭೇಟಿ ನೀಡಿದ್ದಾರೆಂದು ವಿದೇಶಾಂಗ ಸಚಿವಾಲಯ ಬುಧವಾರ ಲೋಕಸಭೆಗೆ ತಿಳಿಸಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಮುರಳೀಧರನ್ ಅವರು ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸುತ್ತಾ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ, ವಿದೇಶಾಂಗ ಸಚಿವ ಹಾಗೂ ತನ್ನ ವಿದೇಶ ಪ್ರಯಾಣದ ವಿವರಗಳನ್ನು ನೀಡಿದರು.

ಈ ವರ್ಷದ ಆಗಸ್ಟ್‌ನಿಂದ ನವೆಂಬರ್‌ವರೆಗೆ ಪ್ರಧಾನಿಯವರು ಭೂತಾನ್, ಫ್ರಾನ್ಸ್, ಯುಎಇ, ಬಹರೈನ್, ರಶ್ಯ, ಅಮೆರಿಕ, ಸೌದಿ ಆರೇಬಿಯ, ಥೈಲ್ಯಾಂಡ್ ಹಾಗೂ ಬ್ರೆಝಿಲ್ ದೇಶಗಳನ್ನು ಸಂದರ್ಶಿಸಿದ್ದರೆಂದು ಮುರಳೀಧರನ್ ಹೇಳಿದರು.

ಅಮೆರಿಕ ಮೂಲದ ‘ಟೆಕ್ಸಾಸ್ ಇಂಡಿಯಾ ಫಾರಂ’ ಸಂಸ್ಥೆಯು ಸೆಪ್ಟೆಂಬರ್ 22ರಂದು ಹ್ಯೂಸ್ಟನ್‌ನಲ್ಲಿ ಆಯೋಜಿಸಿದ್ದ ಹೌಡಿ, ಮೋದಿ! ಶೇರ್ಡ್‌ ಡ್ರೀಮ್ಸ್, ಬ್ರೈಟ್ ಫ್ಯುಚರ್ಸ್‌ ಎಂಬ ಕಾರ್ಯಕ್ರಮದಲ್ಲಿ ಮೋದಿ ಭಾಗವರಿಸಿದ್ದರು ಎಂದು ಮುರಳೀಧರನ್ ಸದನಕ್ಕೆ ತಿಳಿಸಿದರು.

ಕಾರ್ಯಕ್ರಮದ ಸಂಘಟಕರ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು.್ದ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರಿದ್ದ ಈ ಸಭೆಯನ್ನುದ್ದೇಶಿ ಮೋದಿ ಭಾಷಣ ಮಾಡಿದರೆಂದು ಸಚಿವರು ಹೇಳಿದರು.

ಆಗಸ್ಟ್‌ನಿಂದ ನವೆಂಬರ್ ತಿಂಗಳವರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೂರು ವಿದೇಶ ಯಾತ್ರೆಗಳನ್ನು ಕೈಗೊಂಡಿದ್ದು, ಏಳು ದೇಶಗಳನ್ನು ಸಂದರ್ಶಿಸಿದ್ದರು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕೂಡಾ ಮೂರು ವಿದೇಶ ಪ್ರವಾಸ ಕೈಗೊಂಡಿದ್ದು, ಆರು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಎದಂರು.

ಈ ಅವಧಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ 13 ವಿದೇಶ ಪ್ರವಾಸಗಳನ್ನು ನಡೆಸಿದ್ದು, 16ದೇಶಗಳನ್ನು ಸಂದರ್ಶಿಸಿದ್ದಾರೆ. ಸಹಾಯಕ ವಿದೇಶಾಂಗ ಸಚಿವ ಮುರಳೀಧರನ್ 10 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, 16 ದೇಶಗಳಿಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News