ಸೋನಿಯಾ, ರಾಹುಲ್, ಪ್ರಿಯಾಂಕರಿಗೆ ಎಸ್‌ಪಿಜಿ ಭದ್ರತೆ ಮರುಸ್ಥಾಪಿಸಿ: ಆನಂದ್ ಶರ್ಮಾ

Update: 2019-11-20 16:41 GMT
PTI

ಹೊಸದಿಲ್ಲಿ, ನ. 20: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ನಾಲ್ವರು ನಾಯಕರಿಗೆ ನೀಡಲಾಗಿದ್ದ ಎಸ್‌ಪಿಜಿ (ಸ್ಪೇಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ಮರು ಸ್ಥಾಪಿಸುವಂತೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಕೇಂದ್ರ ಸರಕಾರವನ್ನು ಬುಧವಾರ ಆಗ್ರಹಿಸಿದ್ದಾರೆ.

ನಾಯಕರ ವೈಯುಕ್ತಿಕ ಭದ್ರತೆ ಪಕ್ಷಪಾತದ ರಾಜಕೀಯಕ್ಕೆ ಹೊರತಾದುದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕ ಶರ್ಮಾ ಹೇಳಿದ್ದಾರೆ.

‘‘ಸೋನಿಯಾ ಗಾಂಧಿ ಹಾಗೂ ಇತರ ನಾಯಕರಿಗೆ ಎಸ್‌ಪಿಜಿ ಭದ್ರತೆ ಮರು ಸ್ಥಾಪಿಸುವ ಬಗ್ಗೆ ಪರಿಶೀಲನೆ ನಡೆಸಿ. ಅದು ದೇಶದ ಹಿತಾಸಕ್ತಿ. ಇಲ್ಲದೇ ಇದ್ದರೆ ಎಸ್‌ಪಿಜಿ ಭದ್ರತೆ ಹಿಂದೆ ತೆಗೆದ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ’’ ಎಂದು ಅವರು ಹೇಳಿದರು.

ಈ ಹಿಂದೆ ಕೇಂದ್ರ ಸರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಹಿಂದೆ ತೆಗೆದುಕೊಂಡು ಎಸ್‌ಪಿಜಿ ಭದ್ರತೆ ನೀಡಿತ್ತು.

  ಶರ್ಮಾ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಭದ್ರತೆಯನ್ನು ಹಿಂದೆ ತೆಗೆದುಕೊಂಡಿಲ್ಲ. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಗೃಹ ಸಚಿವಾಲಯ ಅದರದ್ದೇ ಆದ ಕಾರ್ಯನಿರ್ವಹಣಾ ರೀತಿ ಹಾಗೂ ಶಿಷ್ಟಾಚಾರ ಹೊಂದಿದೆ. ಇದನ್ನು ರಾಜಕಾರಣಿಗಳು ಮಾಡುತ್ತಿಲ್ಲ. ಇದನ್ನು ಗೃಹ ಸಚಿವಾಲಯ ಮಾಡುತ್ತದೆ. ಅಲ್ಲದೆ, ಬೆದರಿಕೆಯ ಗ್ರಹಿಕೆಯ ಹಿನ್ನೆಲೆಯಲ್ಲಿ ಭದ್ರತೆ ನೀಡುವುದು ಹಿಂದೆ ತೆಗೆಯುವುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News