ಈಶಾನ್ಯ ಭಾರತದಲ್ಲಿ ಸುಮಾರು 28 ಸಾವಿರ ಮಂದಿ ನಾಪತ್ತೆ: ರಾಜ್ಯಸಭೆಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ

Update: 2019-11-20 17:13 GMT

ಹೊಸದಿಲ್ಲಿ, ನ.20: 2015-17ರಿಂದೀಚೆಗೆ ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 28 ಸಾವಿರ ಮಂದಿ ನಾಪತ್ತೆಯಾಗಿದ್ದಾರೆಂದು ಬುಧವಾರ ರಾಜ್ಯಸಭೆಗೆ ತಿಳಿಸಲಾಯಿತು.

ನಾಪತ್ತೆಯಾದ 27,967 ಮಂದಿಯ ಪೈಕಿ 19,344 ಮಂದಿ ಅಸ್ಸಾಂನವರಾಗಿದ್ದು, 4455 ಮಂದಿ ತ್ರಿಪುರದವರಾಗಿದ್ದರು. 1385 ಮಂದಿ ಮೇಘಾಲಯ, 999 ಮಂದಿ ಮಣಿಪುರ, 974 ಮಂದಿ ಸಿಕ್ಕಿಂ, 457 ಮಂದಿ ಅರುಣಾಚಲ ಪ್ರದೇಶದಿಂದ 457 , ನಾಗಾಲ್ಯಾಂಡ್‌ನಿಂದ 343 ಹಾಗೂ ಮಿರೆರಾಂನಿಂದ 10 ಮಂದಿ ನಾಪತ್ತೆಯಾಗಿದ್ದಾರೆಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಕಿಶನ್ ರೆಡ್ಡಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.

ಆದರೆ 2018 ಹಾಗೂ 2019ರಲ್ಲಿ ನಾಪತ್ತೆಯಾದವರ ವಿವರಗಳು ಸರಕಾರಕ್ಕೆ ಲಭ್ಯವಿಲ್ಲವೆಂದವರು ತಿಳಿಸಿದ್ದಾರೆ.

 ಇದೇ ಸಂದರ್ಭದಲ್ಲಿ ಸಚಿವರು, ಈಶಾನ್ಯ ಭಾರತದ ಈ ಎಂಟು ರಾಜ್ಯಗಳಲ್ಲಿ ಮರುಪತ್ತೆಯಾದ ಮಕ್ಕಳ ವಿವರಗಳನ್ನು ಕೂಡಾ ನೀಡಿದರು. 2015-17ರ ಅವಧಿಯಲ್ಲಿ ಒಟ್ಟು 5130 ಮಂದಿ ಮಕ್ಕಳು ಮರಳಿ ಪತ್ತೆಯಾಗಿದ್ದಾರೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News