ಚಿಟ್‌ಫಂಡ್ ಮಸೂದೆಗೆ ಲೋಕಸಭೆ ಅಸ್ತು

Update: 2019-11-20 17:43 GMT

ಹೊಸದಿಲ್ಲಿ, ನ.20: ದೇಶಾದ್ಯಂತ ಚಿಟ್‌ಫಂಡ್‌ಗಳ ಕಾರ್ಯನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸುವ ಹಾಗೂ ಹೂಡಿಕೆದಾರರ ಅದರಲ್ಲೂ ಮುಖ್ಯವಾಗಿ ಸಮಾಜದ ದುರ್ಬಲ ವರ್ಗಗಳಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿರುವ 2019 ರ ಚಿಟ್‌ಫಂಡ್ (ತಿದ್ದುಪಡಿ) ವಿಧೇಯಕವನ್ನು ಲೋಕಸಭೆಯು ಬುಧವಾರ ಧ್ವನಿಮತದಿಂದ ಅಂಗೀಕರಿಸಿದೆ.

ಬಡವರು, ಮಧ್ಯಮವರ್ಗದವರು ಹೆಚ್ಚಿನ ಬಡ್ಡಿಯ ಆಸೆಗೆ ಮೋಸಹೋಗದಂತೆ ತಡೆಯುವುದೇ ನೂತನ ವಿಧೇಯಕವಾದ ಉದ್ದೇಶವಾಗಿದೆಯೆಂದು ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ಸದನದಲ್ಲಿ ವಿಧೇಯಕವನ್ನು ಮಂಡಿಸುತ್ತಾ ತಿಳಿಸಿದರು.

ನೂತನವಿಧೇಯಕವು, 1982 ಚಿಟ್‌ಫಂಡ್ ಕಾಯ್ದೆಗೆ ತಿದ್ದುಪಡಿ ಮಾಡಿದೆ. ನೂತನ ತಿದ್ದುಪಡಿಯಿಂದಾಗಿ ವ್ಯಕ್ತಿಗಳು ವೈಯಕ್ತಿಕವಾಗಿ ನಡೆಸಲ್ಪಡುವ ಚಿಟ್‌ಫಂಡ್‌ಗಳು ಗರಿಷ್ಠ 3 ಲಕ್ಷದವರೆಗೂ ಚಿಟ್‌ಫಂಡ್ ಸಂಗ್ರಹಿಸಬಹುದಾಗಿದೆ. ಈವರೆಗೆ 1 ಲಕ್ಷ ರೂ. ಗರಿಷ್ಠ ಮಿತಿಯಾಗಿತ್ತು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪಾಲುದಾರರನ್ನು ಹೊಂದಿರುವ ಸಂಸ್ಥೆಗಳ ಚಿಟ್‌ಫಂಡ್ ಮಿತಿಯನ್ನು ಈಗ 6 ಲಕ್ಷ ರೂ.ಗಳಿಂದ 18 ಲಕ್ಷ ರೂ.ವರೆಗೆ ಏರಿಸಲಾಗಿದೆ.

ಚಿಟ್‌ಫಂಡ್‌ನ್ನು ನಿರ್ವಹಿಸುವ ವ್ಯಕ್ತಿಯ ಕಮೀಶನ್ ಹಣವನ್ನು ಶೇ.5ರಿಂದ ಶೇ.7ಕ್ಕೆ ಏರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News