ಮೋದಿ ವಿದೇಶ ಪ್ರವಾಸ: ಚಾರ್ಟರ್ಡ್ ವಿಮಾನಗಳಿಗಾಗಿ 255 ಕೋಟಿ ರೂ. ವೆಚ್ಚ

Update: 2019-11-22 10:03 GMT

ಹೊಸದಿಲ್ಲಿ : ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ವಿದೇಶ ಪ್ರವಾಸಗಳಿಗಾಗಿ ಚಾರ್ಟರ್ಡ್ ವಿಮಾನಗಳಿಗಾಗಿ 255 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 ಪ್ರಧಾನಿಯ ಪ್ರವಾಸಗಳಿಗಾಗಿ ಚಾರ್ಟರ್ಡ್ ವಿಮಾನಗಳಿಗಾಗಿ 2016-17ರಲ್ಲಿ ರೂ 76.27 ಕೋಟಿ,  2017-18ರಲ್ಲಿ ರೂ 99.32 ಕೋಟಿ  ಹಾಗೂ 2018-19ರಲ್ಲಿ ರೂ 79.91 ಕೋಟಿ  ವೆಚ್ಚ ಮಾಡಲಾಗಿದೆ. ಆದರೆ 2019-2020ರ ಬಿಲ್ ಇನ್ನೂ ದೊರಕಿಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

 ಆರ್ಥಿಕ ವರ್ಷ 2016-17ರಲ್ಲಿ ಹಾಟ್‍ ಲೈನ್ ವ್ಯವಸ್ಥೆಗಳಿಗಾಗಿ ರೂ 2,24,75,451 ವೆಚ್ಚ ಮಾಡಲಾಗಿದ್ದರೆ 2017-18ರಲ್ಲಿ ರೂ 58,06,630 ವೆಚ್ಚ ಮಾಡಲಾಗಿದೆ.

ದೇಶದಲ್ಲಿ ವಿವಿಧೆಡೆ ಪ್ರಧಾನಿಯ ಪ್ರಯಾಣ ವೆಚ್ಚಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ``ಸರಕಾರದ ನೀತಿಯಂತೆ ಪ್ರಧಾನಿಗೆ  ಭಾರತೀಯ ವಾಯುಸೇನೆಯ ವಿಮಾನಗಳು ಹಾಗೂ ಹೆಲಿಕಾಪ್ಟರುಗಳಲ್ಲಿ ಅಧಿಕೃತ ಪ್ರವಾಸಗಳಿಗಾಗಿ ಉಚಿತ ಸೇವೆ ಒದಗಿಸಲಾಗುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News