×
Ad

ಕೊಲಂಬಿಯ: ಪೊಲೀಸ್ ಠಾಣೆಯ ಮೇಲೆ ದಾಳಿ; 3 ಅಧಿಕಾರಿಗಳ ಸಾವು

Update: 2019-11-23 22:34 IST

ಕಲಿ (ಕೊಲಂಬಿಯ), ನ. 23: ಕೊಲಂಬಿಯ ದೇಶದ ನೈರುತ್ಯ ಭಾಗದಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ದುಷ್ಕರ್ಮಿಗಳು ಶುಕ್ರವಾರ ನಡೆಸಿದ ದಾಳಿಯಲ್ಲಿ ಮೂವರು ಪೊಲೀಸರು ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘‘ಪೊಲೀಸ್ ಠಾಣೆಯಲ್ಲಿ ಅನಿಲ ಸಿಲಿಂಡರ್‌ಗಳನ್ನು ಸ್ಫೋಟಿಸುವ ಮೂಲಕ ದಾಳಿ ನಡೆಸಲಾಗಿದೆ’’ ಎಂದು ಕಲಿ ನಗರ ಕಾರ್ಯದರ್ಶಿ ಜೈಮ್ ಆ್ಯಸ್ಪ್ರಿಲಾ ಹೇಳಿದರು.

ಪೊಲೀಸ್ ಠಾಣೆ ಮೇಲೆ ನಡೆದ ದಾಳಿಗೂ, ದೇಶದ ಅಧ್ಯಕ್ಷ ಇವಾನ್ ಡಕ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News