737 ಮ್ಯಾಕ್ಸ್‌ನ ಹೊಸ ಮಾದರಿ ಅನಾವರಣಗೊಳಿಸಿದ ಬೋಯಿಂಗ್

Update: 2019-11-23 17:26 GMT

ನ್ಯೂಯಾರ್ಕ್, ನ. 23: ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ಶುಕ್ರವಾರ ಹೊಸ ಮಾದರಿಯ 737 ಮ್ಯಾಕ್ಸ್ ವಿಮಾನವನ್ನು ಅನಾವರಣಗೊಳಿಸಿದೆ. 737 ಮ್ಯಾಕ್ಸ್ ವಿಮಾನಗಳನ್ನೊಳಗೊಂಡ ಎರಡು ಅಪಘಾತಗಳ ಬಳಿಕ ಈ ಮಾದರಿಯ ವಿಮಾನಗಳನ್ನು ಕಂಪೆನಿಯು ಈಗಾಗಲೇ ಹಾರಾಟದಿಂದ ಹೊರಗಿಟ್ಟಿದೆ.

ವಾಶಿಂಗ್ಟನ್‌ನ ರೆಂಟನ್‌ನಲ್ಲಿರುವ ಕಂಪೆನಿಯ ಕಾರ್ಖಾನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅಧಿಕಾರಿಗಳು 737 ಮ್ಯಾಕ್ಸ್ 10 ಮಾದರಿಯ ವಿಮಾನವನ್ನು ಅನಾವರಣಗೊಳಿಸಿದರು ಹಾಗೂ ಬೋಯಿಂಗ್‌ನ ಲಾಂಛನವನ್ನು ಹೊಂದಿದ ಬಿಳಿ ಮತ್ತು ನೀಲಿ ಬಣ್ಣದ ವಿಮಾನದ ಚಿತ್ರವನ್ನು ಬಿಡುಗಡೆಗೊಳಿಸಿದರು.

ಎರಡು ಭೀಕರ ಅಪಘಾತಗಳಲ್ಲಿ 346 ಪ್ರಯಾಣಿಕರು ಸಾವಿಗೀಡಾದ ಬಳಿಕ ಮಾರ್ಚ್ ತಿಂಗಳಲ್ಲಿ ಬೋಯಿಂಗ್ ಕಂಪೆನಿಯು 737 ಮ್ಯಾಕ್ಸ್ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿದೆ. ಈ ವಿಮಾನಗಳು ಶೀಘ್ರವೇ ಹಾರಾಟದಲ್ಲಿ ತೊಡಗುತ್ತವೆ ಎಂಬ ನಿರೀಕ್ಷೆಯನ್ನು ಬೋಯಿಂಗ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News