ಚಂದಾ ಕೊಚ್ಚರ್ ಜೀವನಾಧರಿತ ಚಲನಚಿತ್ರ ಬಿಡುಗಡೆಗೆ ದಿಲ್ಲಿ ನ್ಯಾಯಾಲಯ ತಡೆ

Update: 2019-11-24 04:22 GMT

ಹೊಸದಿಲ್ಲಿ, ನ.24: ಮಾಜಿ ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಸಿಇಒ ಚಂದಾ ಕೊಚ್ಚರ್  ಜೀವಚಿತ್ರ ಆಧಾರಿತ ಚಲನಚಿತ್ರ ಬಿಡುಗಡೆಯನ್ನು ದಿಲ್ಲಿ ನ್ಯಾಯಾಲಯ ಶನಿವಾರ ತಡೆಯಾಜ್ಞೆ ನೀಡಿದೆ

ಚಂದಾ ಕೊಚ್ಚರ್ ಅವರು ತಮ್ಮ ವಕೀಲರಾದ ವಿಜಯ್ ಅಗರ್ವಾಲ್ ಮತ್ತು ನಮನ್ ಜೋಶಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಅವರ ಜೀವನಚರಿತ್ರೆಯನ್ನು ಆಧರಿಸಿದ ಚಲನಚಿತ್ರ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿದೆ. ತನ್ನ ಅರ್ಜಿಯಲ್ಲಿ ಚಂದಾ ಕೊಚ್ಚರ್ ಅವರು ತನ್ನ ಜೀವನವನ್ನು ಆಧರಿಸಿದ ಚಿತ್ರವು ತನ್ನನ್ನು "ನಿಂದಿಸುವ" ಪ್ರಯತ್ನ ಎಂದು ಹೇಳಿದ್ದರು.

ಹೊಸದಿಲ್ಲಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ನ್ಯಾಯಾಧೀಶ ಸಂದೀಪ್ ಗರ್ಗ್ ಅವರು ಶನಿವಾರ ಆದೇಶ ಹೊರಡಿಸಿದ್ದು, ನಿರ್ಮಾಪಕರು ಮತ್ತು ಅವರ ಸಹವರ್ತಿ ಏಜೆಂಟರ ಪ್ರತಿನಿಧಿಗಳು ಮತ್ತು ಇತರ ಎಲ್ಲ ನಟರನ್ನು ಒಳಗೊಂಡ ಎಲ್ಲರು  ಚಂದಾ ಕೊಚ್ಚರ್ ಅವರ ಹೆಸರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸುವುದನ್ನು ನಿರ್ಬಂಧಿಸಿದ್ದಾರೆ.

ಚಂದಾ ಕೊಚ್ಚರ್ ಅವರ ಅರ್ಜಿಯ ಪ್ರಕಾರ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಸಂದರ್ಶನವೊಂದರಲ್ಲಿ ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಅವರ ವಾಕಿಂಗ್, ಟಾಕಿಂಗ್, ಬಾಡಿ ಲಾಂಗ್ವೇಜ್ ಇತ್ಯಾದಿಗಳನ್ನು ಅವರು ಚಿತ್ರಿಸಿದ್ದಾರೆ ಎಂದು  ಆರೋಪಿಸಿದ್ದಾರೆ. ನಟಿ ಗುರ್ಲೀನ್ ಚೋಪ್ರಾ ಜೀವನಚರಿತ್ರೆಯಲ್ಲಿ ಚಂದಾ ಕೊಚ್ಚರ್ ಪಾತ್ರದಲ್ಲಿದ್ದಾರೆ.

ಚಂದಾ ಕೊಚ್ಚರ್ ಅವರು ಜೂನ್ 2009 ಮತ್ತು ಅಕ್ಟೋಬರ್ 2011 ರ ನಡುವೆ ಐಸಿಐಸಿಐ ಬ್ಯಾಂಕ್ ಸಿಇಒ ಆಗಿದ್ದಾಗ ವಿಡಿಯೊಕಾನ್ ಗ್ರೂಪ್ ಗೆ  1,875 ಕೋಟಿ ರೂ.ಗಳ ಆರು ಸಾಲಗಳನ್ನು ಮಂಜೂರು ಮಾಡಿದ ಹಗರಣದ ಬಗ್ಗೆ  ಈ.ಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News