76,164 ಕೋಟಿ ರೂ. ಕಳೆದುಕೊಂಡ ಭಾರತದ ಅಗ್ರ 7 ಕಂಪನಿಗಳು

Update: 2019-11-24 09:27 GMT
Photo: twitter.com/People_TCS

ಹೊಸದಿಲ್ಲಿ: ಭಾರತದ ಅಗ್ರ 10 ಅತ್ಯುನ್ನತ ಕಂಪನಿಗಳ ಪೈಕಿ ಏಳು ಕಂಪನಿಗಳು ಕಳೆದ ಒಂದು ವಾರದಲ್ಲಿ 76,164 ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದ್ದು, ಈ ಪೈಕಿ ಟಿಸಿಎಸ್ ಗೆ ಭಾರೀ ಹೊಡೆತ ಬಿದ್ದಿದೆ.

ಅಗ್ರ 10 ಕಂಪನಿಗಳ ಪೈಕಿ ಕೇವಲ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ (ಆರ್‍ಐಎಲ್), ಎಚ್‍ ಡಿಎಫ್‍ಸಿ ಮತ್ತು ಎಸ್‍ ಬಿಐ ಮಾತ್ರ ತಮ್ಮ ಮಾರುಕಟ್ಟೆ ಮೌಲ್ಯಮಾಪನದಲ್ಲಿ ಗಳಿಕೆ ದಾಖಲಿಸಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನ ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ-ಕ್ಯಾಪ್) 39,118.6 ಕೋಟಿಯಷ್ಟು ಕಡಿಮೆಯಾಗಿದ್ದು, 7,76,950.02 ಕೋಟಿ ರೂ.ಗೆ ತಲುಪಿದೆ. ಕೋಟಕ್ ಮಹೀಂದ್ರಾ ಬ್ಯಾಂಕಿನ ಮೌಲ್ಯ 10,410.2 ಕೋಟಿ ರೂ.ನಷ್ಟು ಕುಸಿದು 2,99,602.51 ಕೋಟಿ ರೂ.ಗೆ ಇಳಿದಿದ್ದರೆ, ಇನ್ಫೋಸಿಸ್ ಮೌಲ್ಯ 7,174.59 ಕೋಟಿ ರೂ.ನಷ್ಟು ಕುಸಿದು 2,95,174.92 ಕೋಟಿ ರೂ. ಆಗಿದೆ.

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‍ ನ ಮಾರುಕಟ್ಟೆ ಮೌಲ್ಯ 7,154.7 ಕೋಟಿ ಕುಸಿದು 4,38,201.26 ಕೋಟಿ ಆಗಿದ್ದರೆ, ಎಚ್‍ ಡಿಎಫ್‍ ಸಿ ಬ್ಯಾಂಕ್ ಮೌಲ್ಯ 7033.27 ಕೋಟಿಯಷ್ಟು ಕುಸಿದು 6,92,671.21 ಕೋಟಿ ರೂ.ಗೆ ತಲುಪಿದೆ. ಐಟಿಸಿ ಮೌಲ್ಯ 3686.3 ಕೋಟಿಯಷ್ಟು ಕುಸಿದು 3,04,304.16 ಕೋಟಿ, ಐಸಿಐಸಿಐ ಮೌಲ್ಯ 1586.18 ಕೋಟಿಯಷ್ಟು ಇಳಿಕೆ ಕಂಡು 321139.67 ಕೋಟಿ ಆಗಿದೆ.

ರಿಲಯನ್ಸ್ ಮೌಲ್ಯ 48,874.91 ಕೋಟಿ ಹೆಚ್ಚಾಗಿದ್ದು, 9,80,287.54 ಕೋಟಿ ರೂ.ಗೆ ಏರಿದೆ. ಎಸ್‍ಬಿಐ ಮೌಲ್ಯ 6381.1 ಕೋಟಿ ರೂ.ನಷ್ಟು ಹೆಚ್ಚಳ ಕಂಡಿದ್ದು 2,93,753.59 ಕೋಟಿ ರೂ. ಆಗಿದೆ. ಎಚ್‍ಡಿಎಫ್‍ಸಿ ಮೌಲ್ಯ 2098.74 ಕೋಟಿಯಷ್ಟು ಹೆಚ್ಚಿದ್ದು, 3,86,298.69 ಕೋಟಿ ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News