ದೇಶಕ್ಕೆ ಎರಡನೆ ರಾಜಧಾನಿಯ ಅಗತ್ಯವಿಲ್ಲ: ಕೇಂದ್ರ
Update: 2019-11-27 21:21 IST
ಹೊಸದಿಲ್ಲಿ, ನ.27: ದಕ್ಷಿಣ ಭಾರತದಲ್ಲಿ ದೇಶದ ಎರಡನೆ ರಾಜಧಾನಿಯನ್ನು ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕಾದ ಅಗತ್ಯವಿದೆಯೆಂದು ತಾನು ನಂಬಲಾರೆ ಎಂದು ಕೇಂದ್ರ ಸರಕಾರವು ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಆಂದ್ರಪ್ರದೇಶದ ಸಂಸದ ಕೆ.ವಿ. ರಾಮಚಂದ್ರರಾವ್ ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.