×
Ad

377 ಬಾಲ ಅಶ್ಲೀಲ ಜಾಲತಾಣಗಳಿಗೆ ನಿರ್ಬಂಧ

Update: 2019-11-28 23:00 IST

ಹೊಸದಿಲ್ಲಿ, ನ.28: ಬಾಲ ಅಶ್ಲೀಲ ಕಂಟೆಟ್ ಗಳನ್ನು  ಸರಕುಗಳನ್ನು ಹೊಂದಿದ್ದ 377 ಜಾಲತಾಣಗಳನ್ನು ಕಿತ್ತುಹಾಕಲಾಗಿದ್ದು,50 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಚುರುಕಿನ ಕ್ರಮಗಳನ್ನು ತೆಗೆದುಕೊಳ್ಳಲು ಇಂತಹ ಅಶ್ಲೀಲ ತಾಣಗಳ ಬಗ್ಗೆ ತುರ್ತಾಗಿ ವರದಿ ಮಾಡುವಂತೆ ಅವರು ಆಗ್ರಹಿಸಿದರು.

 ಶೂನ್ಯವೇಳೆಯಲ್ಲಿ ಎಡಿಎಂಕೆಯ ವಿಜಿಲಾ ಸತ್ಯಾನಂದ ಅವರು ಮೊಬೈಲ್ ಪೋನ್ ಮತ್ತು ಅಂತರ್ಜಾಲದಲ್ಲಿ ಅಶ್ಲೀಲ ಜಾಲತಾಣಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಮಕ್ಕಳ ಶೋಷಣೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಉಲ್ಲೇಖಿಸಿದಾಗ ಮಧ್ಯೆ ಪ್ರವೇಶಿಸಿದ ಇರಾನಿ,ಸೂಕ್ತ ಕ್ರಮಕ್ಕಾಗಿ ಇಂತಹ ಘಟನೆಗಳನ್ನು ವರದಿ ಮಾಡುವ ವಿಧಿವಿಧಾನಗಳನ್ನು ಜಿಲ್ಲಾಡಳಿತಗಳ ಜೊತೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದ ಸತ್ಯಾನಂದ, ಮಕ್ಕಳನ್ನು ರಕ್ಷಿಸಲು ಇಂತಹ ವಿಷಯಗಳನ್ನು ಒಳಗೊಂಡಿರುವ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿದರು.

ಘಟನೆಗಳ ವಿವರಗಳನ್ನು ಒದಗಿಸಿದರೆ ತಕ್ಷಣವೇ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ಇರಾನಿ ತಿಳಿಸಿದರು.

ಸರಕಾರದ ಹೂಡಿಕೆ ಹಿಂದೆಗೆತ ಅಭಿಯಾನವನ್ನು ಪ್ರಶ್ನಿಸಿದ ಸಂಜಯ ಸಿಂಗ್ (ಆಪ್) ಅವರು,ಬಿಪಿಸಿಎಲ್,ಎಸ್‌ಸಿಐ ಮತ್ತು ಕಾಂಕರ್‌ನಂತಹ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಖಾಸಗೀಕರಣದ ಇತ್ತೀಚಿನ ಹೆಜ್ಜೆಯು ಉದ್ಯೋಗಿಗಳ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡಿದೆ ಎಂದರು.

ಶಾಲಾಮಕ್ಕಳಿಗೆ ಒದಗಿಸಲಾಗುತ್ತಿರುವ ಮಧ್ಯಾಹ್ನದೂಟದಲ್ಲಿ ಪೋಷಕಾಂಶ ವೌಲ್ಯಗಳನ್ನು ನಿರ್ಧರಿಸಲು ಯೋಜನೆಯನ್ನು ಪುನರ್‌ಪರಿಶೀಲಿಸುವಂತೆ ವಿಪ್ಲವ್ ಠಾಕೂರ್ (ಕಾಂಗ್ರೆಸ್) ಕೋರಿದರೆ,ಅಹ್ಮದ್ ಹಸನ್ ಅವರು ನಾಲ್ಕು ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ಅಲಿಗಡ ಮುಸ್ಲಿಂ ವಿವಿಯ ನಾಲ್ಕು ಕ್ಯಾಂಪಸ್‌ಗಳ ದಯನೀಯ ಸ್ಥಿತಿಯನ್ನು ಪ್ರಸ್ತಾಪಿಸಿದರು.

ರ್ಯತರಿಗೆ ಸಾಲಗಳನ್ನು ನೀಡಲು ಸಿಬಿಲ್ ಸ್ಕೋರ್ ಅನ್ನು ದೃಢಪಡಿಸಿಕೊಳ್ಳುವಂತೆ ಬ್ಯಾಂಕುಗಳಿಗೆ ಆರ್‌ಬಿಐನ ಇತ್ತೀಚಿನ ನಿರ್ದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿ.ವಿಜಯಸಾಯಿ ರೆಡ್ಡಿ ಅವರು,ಇದು ಸಾಲಗಳನ್ನು ನಿರಾಕರಿಸಲು ಕಾರಣವಾಗುತ್ತದೆ ಎಂದರು.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿವೇತನಗಳಿಗಾಗಿ ನಿಗದಿ ಪಡಿಸಿರುವ 2.5 ಲ.ರೂ.ಗಳ ಕುಟುಂಬ ಆದಾಯ ಮಿತಿಯನ್ನು ರದ್ದುಗೊಳಿಸುವಂತೆ ಕೆ.ಸೋಮಪ್ರಸಾದ (ಸಿಪಿಎಂ) ಅವರು ಆಗ್ರಹಿಸಿದರೆ,ಇಪಿಎಫ್ ಸಂಸ್ಥೆಯಲ್ಲಿ ಹಕ್ಕು ಕೋರಿಕೆಯಾಗದೇ 55,000 ಕೋ.ರೂ.ಕೊಳೆಯುತ್ತಿರುವುದನ್ನು ಪ್ರಸ್ತಾಪಿಸಿದ ಅಹ್ಮದ್ ಅಷ್ಫಾಕ್ ಕರೀಂ (ಆರ್‌ಜೆಡಿ) ಅವರು ಫಲಾನುಭವಿಗಳನ್ನು ಗುರುತಿಸಿ ಅವರ ಬಾಕಿಗಳನ್ನು ಪಾವತಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News