×
Ad

ಆರು ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ

Update: 2019-12-01 20:07 IST

ಜೈಪುರ, ಡಿ.1: ರಾಜಸ್ಥಾನದ ಟೊಂಕ್ ಜಿಲ್ಲೆಯ ಅಲಿಗಡ ಪಟ್ಟಣದ ಖೇಲ್ಡಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಆರರ ಹರೆಯದ ಬಾಲಕಿಯ ಶವವು ಪತ್ತೆಯಾಗಿದ್ದು,ಆಕೆಯ ಮೇಲೆ ಅತ್ಯಾಚಾರಗೈದು ಬಳಿಕ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂದಿನಂತೆ ಶನಿವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದ ಬಾಲಕಿ ತಡಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಗಾಬರಿಗೊಂಡ ಮನೆಮಂದಿ ಹುಡುಕಾಟ ನಡೆಸಿದಾಗ ಖೇಲ್ಡಿ ಗ್ರಾಮದ ನಿರ್ಜನ ಸ್ಥಳದಲ್ಲಿ ಬಾಲಕಿಯ ಶವವು ಪತ್ತೆಯಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಬಳಿಕ ಉಸಿರುಗಟ್ಟಿಸಿ ಸಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News