10ನೆ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ !

Update: 2019-12-02 15:13 GMT
Photo: ndtv.com

ಇಂಫಾಲ್ (ಮಣಿಪುರ), ಡಿ. 2: ಇಲ್ಲಿನ ಚುರಚಾಂದ್‌ಪುರದ ಕಾಂಗ್ವೈ ಗ್ರಾಮದ 12 ವರ್ಷದ ಬಾಲಕ ಐಸಾಕ್ ಪೌಲಾಲ್ಲುಂಗ್ಮೌನ್ ವಾಯಿಫೈ ಮಣಿಪುರದಲ್ಲಿ 10ನೇ ತರಗತಿ ಪರೀಕ್ಷೆ ಬರೆಯುವ ಅತಿ ಕಿರಿಯ ವಿದ್ಯಾರ್ಥಿ.

ಐಸಾಕ್‌ಗೆ 10ನೇ ತರಗತಿ ಪರೀಕ್ಷೆ ಬರೆಯಲು ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಬಿಒಎಸ್‌ಇಎಂ) ಅನುಮತಿ ನೀಡಿದೆ. ಮಂಡಳಿಯ ಮುಂದಿನ ಪರೀಕ್ಷೆ ಬರೆಯಲು ವಾಸ್ತವ ಜನ್ಮ ದಿನಾಂಕದೊಂದಿಗೆ ಹೆಸರು ನೋಂದಾಯಿಸುವಂತೆ ಬಿಒಎಸ್‌ಇಎಂನ ಆಡಳಿತ ಮಂಡಳಿ ಸೂಚಿಸಿದೆ.

ಐಸಾಕ್ ಮೌಂಟ್ ಒಲೈವ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ. ''10ನೇ ಪರೀಕ್ಷೆ ಬರೆಯಲು ಅನುಮತಿ ದೊರಕಿರುವುದರಿಂದ ನಾನು ಸಂತಸಗೊಂಡಿದ್ದೇನೆ. ನಾನು ಐಸಾಕ್ ನ್ಯೂಟನ್ ಅವರನ್ನು ಮೆಚ್ಚುತ್ತೇನೆ. ಯಾಕೆಂದರೆ, ನನಗೆ ಅವರಂತೆ ಆಗಬೇಕು ಎಂದಿದೆ. ನಮ್ಮದು ಒಂದೇ ಹೆಸರು'' ಎಂದು ಐಸಾಕ್ ಹೇಳಿದ್ದಾನೆ.

10ನೇ ತರಗತಿ ಪರೀಕ್ಷೆ ಬರೆಯಲು ತನ್ನ ಪುತ್ರನಿಗೆ ಅವಕಾಶ ನೀಡುವಂತೆ ಕೋರಿ ಐಸಾಕ್‌ನ ತಂದೆ ಗೆಂಖೋಲಿನ್ ವಾಯಿಫೈ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಗೆಂಖೋಲಿನ್ ಅವರ ಮನವಿ ಪರಿಗಣಿಸಿದ ಶಿಕ್ಷಣ ಇಲಾಖೆ ಐಸಾಕ್‌ನ ಮಾನಸಿಕ ಪರೀಕ್ಷೆಗೆ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News