ಇರಾನ್ ಕೌನ್ಸುಲೇಟ್ ಕಚೇರಿಗೆ ಮತ್ತೆ ಬೆಂಕಿ

Update: 2019-12-02 15:17 GMT

ಬಗ್ದಾದ್, ಡಿ. 2: ರಾಜೀನಾಮೆ ನೀಡುವುದಾಗಿ ಪ್ರಧಾನಿ ಆದಿಲ್ ಅಬ್ದುಲ್ ಮಹದಿ ಘೋಷಿಸಿದ ಬಳಿಕವೂ, ಇರಾಕ್‌ನಲ್ಲಿ ಸರಕಾರ ವಿರೋಧಿ ಪ್ರತಿಭಟನೆಗಳು ಮುಂದುವರಿಯುತ್ತಿದೆ. ಪ್ರತಿಭಟನಕಾರರು ರವಿವಾರ ನಜಾಫ್‌ನಲ್ಲಿರುವ ಇರಾನ್ ಕೌನ್ಸುಲೇಟ್ ಕಚೇರಿಗೆ ವಾರದಲ್ಲಿ ಎರಡನೇ ಬಾರಿ ಬೆಂಕಿ ಹಚ್ಚಿದ್ದಾರೆ.

ಸರಕಾರದಲ್ಲಿರುವ ಕುಲೀನರ ಭ್ರಷ್ಟಾಚಾರ, ಆರ್ಥಿಕ ಹಿನ್ನಡೆ ಮತ್ತು ಕುಸಿದ ಸರಕಾರಿ ಸೇವೆಗಳನ್ನು ವಿರೋಧಿಸಿ ಎರಡು ತಿಂಗಳುಗಳಿಂದ ಇರಾಕ್‌ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಈವರೆಗೆ 420ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಈ ನಡುವೆ, ಪ್ರತಿಭಟನಕಾರರಿಗೆ ಲಭಿಸಿದ ಜಯವೊಂದರಲ್ಲಿ, ನವೆಂಬರ್‌ನಲ್ಲಿ ದಕ್ಷಿಣದ ನಗರ ಕುಟ್‌ನಲ್ಲಿ ಏಳು ನಾಗರಿಕರನ್ನು ಹತ್ಯೆ ಮಾಡಿದ ಆರೋಪದಲ್ಲಿ ಓರ್ವ ಪೊಲೀಸ್ ಮೇಜರ್‌ಗೆ ಮರಣ ದಂಡನೆ ವಿಧಿಸಲಾಗಿದೆ ಹಾಗೂ ಓರ್ವ ಲೆಫ್ಟಿನೆಂಟ್ ಕರ್ನಲ್‌ಗೆ ಏಳು ವರ್ಷಗಳ ಜೈಲು ವಿಧಿಸಲಾಗಿದೆ.

ಪ್ರತಿಭಟನಕಾರರ ವಿರುದ್ಧ ಸರಕಾರ ನಡೆಸುತ್ತಿರುವ ದಮನ ಕಾರ್ಯಾಚರಣೆಯನ್ನು ಪೋಪ್ ಫ್ರಾನ್ಸಿಸ್ ರವಿವಾರ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News