ನಿವೃತ್ತಿಯ ಸುಳಿವು ನೀಡಿದ ಲಿಯಾಂಡರ್ ಪೇಸ್

Update: 2019-12-03 05:55 GMT

ಹೊಸದಿಲ್ಲಿ, ಡಿ.2: ಎದುರಾಳಿ ಆಟಗಾರನನ್ನು ಸೋಲಿಸಲು ನನ್ನ ಅನುಭವವನ್ನೇ ಅವಲಂಬಿಸಿದ್ದೇನೆ. ಇನ್ನೊಂದು ವರ್ಷಕ್ಕಿಂತ ಹೆಚ್ಚು ಸಮಯ ಆಡಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿರುವ ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಶೀಘ್ರವೇ ಟೆನಿಸ್‌ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ಹಲವು ಆಟಗಾರರು ಇಸ್ಲಾಮಾಬಾದ್‌ಗೆ ತೆರಳಲು ಹಿಂದೇಟು ಹಾಕಿದ್ದ ಸಂದರ್ಭದಲ್ಲಿ ಪೇಸ್ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೀವನ್ ಜೊತೆ ಪಾಕಿಸ್ತಾನ ವಿರುದ್ಧ ಡಬಲ್ಸ್ ಪಂದ್ಯವನ್ನು ಜಯಿಸಿದ್ದ ಪೇಸ್ ಡೇವಿಸ್‌ಕಪ್‌ನಲ್ಲಿ 44ನೇ ಡಬಲ್ಸ್ ಪಂದ್ಯವನ್ನು ಗೆದ್ದುಕೊಂಡು ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ‘‘ನಾನು ನನ್ನ ಅನುಭವದ ಬಲದಲ್ಲಿ ಆಡುತ್ತಿದ್ದೇನೆ. ಟೆನಿಸ್‌ನ ಹಿತದೃಷ್ಟಿಯಿಂದ ಇನ್ನೊಂದು ವರ್ಷಕ್ಕಿಂತ ಹೆಚ್ಚು ಸಮಯ ನಾನು ಆಡಬಾರದು. ಇದೀಗ ಭಾರತೀಯ ಟೆನಿಸ್‌ನಲ್ಲಿ ಹೊಸ ಹಾಗೂ ಯುವ ಆಟಗಾರರನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ.ನನಗೆ ಈಗಾಗಲೇ 46 ವರ್ಷ ವಯಸ್ಸಾಗಿದೆ. ತಂಡದ ಹಿತದೃಷ್ಟಿಯಿಂದ ಯುವ ಆಟಗಾರರನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ’’ ಎಂದು ಪೇಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News