'ಯಾಹೂ ಇಂಡಿಯಾ' ವರದಿ ಪ್ರಕಾರ ಈ ಸೂಪರ್ ಹಿಟ್ ಚಿತ್ರ 'ದಶಕದ ಬ್ಲಾಕ್ ಬಸ್ಟರ್'

Update: 2019-12-03 09:43 GMT

ಹೊಸದಿಲ್ಲಿ: ಜಾಗತಿಕ ಬಾಕ್ಸ್ ಆಫೀಸಿನಲ್ಲಿ 2,000 ಕೋಟಿ ರೂ. ಗಡಿ ದಾಟಿದ ಆಮಿರ್ ಖಾನ್ ಅಭಿನಯದ, 2016ರಲ್ಲಿ ಬಿಡುಗಡೆಗೊಂಡ `ದಂಗಲ್' ಚಲನಚಿತ್ರ 'ಯಾಹೂ ಇಂಡಿಯಾ ಡಿಕೇಡ್ ಇನ್ ರಿವೀವ್' ವರದಿ ಪ್ರಕಾರ ದಶಕದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರವಾಗಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಕುಸ್ತಿಪಟುಗಳಾದ ಫೋಗಟ್ ಸೋದರಿಯರು ಹಾಗೂ ಅವರ ತಂದೆಯ ಸುತ್ತ ಹೆಣೆಯಲಾದ ಕಥಾವಸ್ತುವನ್ನು  ಹೊಂದಿದೆ.

`ದಂಗಲ್' ನಂತರದ ಸ್ಥಾನ ಸಲ್ಮಾನ್ ಖಾನ್ ಅಭಿನಯದ 'ಬಜರಂಗಿ ಭಾಯಿಜಾನ್' ಹಾಗೂ ಆಮಿರ್ ಖಾನ್ ಅವರ `ಪೀಕೆ' ಚಲನಚಿತ್ರಗಳಿಗೆ ಹೋಗಿವೆ. ಟಾಪ್ 10 ಬ್ಲಾಕ್ ಬಸ್ಟರ್ ಚಿತ್ರಗಳ ಪಟ್ಟಿಯಲ್ಲಿ ಸುಲ್ತಾನ್, ಟೈಗರ್ ಜಿಂದಾ ಹೈ, ಧೂಮ್ 3, ಸಂಜು, ವಾರ್, ಚೆನ್ನೈ ಎಕ್ಸ್‍ಪ್ರೆಸ್ ಹಾಗು ದಬಾಂಗ್ ಸೇರಿವೆ.

ಈ ವರ್ಷದ ಮೋಸ್ಟ್ ಸರ್ಚ್ಡ್ ಮೇಲ್ ಸೆಲೆಬ್ರಿಟಿ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಪ್ರಥಮ ಸ್ಥಾನ ಪಡೆದಿದ್ದರೆ, ನಂತರದ ಎರಡು ಸ್ಥಾನಗಳು ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಅವರಿಗೆ ಹೋಗಿವೆ.

ಮೋಸ್ಟ್ ಸರ್ಚ್ಡ್ ಫಿಮೇಲ್ ಸೆಲೆಬ್ರಿಟಿ 2019 ಪಟ್ಟಿಯಲ್ಲಿ ಈ ಬಾರಿಯೂ ಪ್ರಥಮ ಸ್ಥಾನ ಸನ್ನಿ ಲಿಯೋನ್ ಅವರಿಗೆ ಹೋಗಿದ್ದರೆ, ನಂತರದ ಸ್ಥಾನಗಳು ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಪಡೆದಿದ್ದಾರೆ.

ನಟ ಹೃತಿಕ್ ರೋಶನ್ ಮೇಲ್ ಸ್ಟೈಲ್ ಐಕಾನ್ ಆಫ್ ದಿ ಇಯರ್ ಎಂದು ಗುರುತಿಸಲ್ಪಟ್ಟರೆ, ಸಾರಾ ಅಲಿ ಖಾನ್ ಅವರನ್ನು ಫಿಮೇಲ್ ಸ್ಟೈಲ್ ಐಕಾನ್ ಆಫ್ 2019 ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News