ಮುಂದಿನ ವರ್ಷದಿಂದ ಪಾಕ್‌ಗೆ ದ್ವಿಪಕ್ಷೀಯ ನೆರವು ಸ್ಥಗಿತ: ಆಸ್ಟ್ರೇಲಿಯ

Update: 2019-12-03 16:53 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಡಿ. 3: ಪೆಸಿಫಿಕ್ ವಲಯದಲ್ಲಿನ ನೂತನ ಬದ್ಧತೆಗಳನ್ನು ಪೂರೈಸುವುದಕ್ಕಾಗಿ ನಿಧಿಗಳನ್ನು ಪುನರ್ರಚಿಸಲಾಗಿದ್ದು, ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ ಎಲ್ಲ ದ್ವಿಪಕ್ಷೀಯ ನೆರವುಗಳನ್ನು ಆಸ್ಟ್ರೇಲಿಯ ನಿಲ್ಲಿಸಲಿದೆ ಎಂದು ವಿದೇಶ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ (ಡಿಎಫ್‌ಎಟಿ)ಯ ಇತ್ತೀಚಿನ ವರದಿಯೊಂದು ತಿಳಿಸಿದೆ.

ಪಾಕಿಸ್ತಾನ ದ್ವಿಪಕ್ಷೀಯ ನಿಧಿ ಕಾರ್ಯಕ್ರಮವನ್ನು 2019-20ರ ಸಾಲಿನಲ್ಲಿ 19 ಮಿಲಿಯ ಆಸ್ಟ್ರೇಲಿಯ ಡಾಲರ್ (ಸುಮಾರು 93 ಕೋಟಿ ರೂಪಾಯಿ)ಗೆ ತಗ್ಗಿಸಲಾಗುವುದು ಹಾಗೂ 2020-21ರ ಅವಧಿಯಲ್ಲಿ ಸಂಪೂರ್ಣವಾಗಿ ರದ್ದಾಗುವುದು ಎಂದು ‘ಏಡ್ ಪ್ರೋಗ್ರಾಮ್ ಪರ್ಫಾರ್ಮನ್ಸ್ ರಿಪೋರ್ಟ್ 2018-19 ಆನ್ ಪಾಕಿಸ್ತಾನ್’ ಎಂಬ ಹೆಸರಿನ ವರದಿ ತಿಳಿಸಿದೆ.

‘‘ಆದರೆ, ಆಸ್ಟ್ರೇಲಿಯ ಅವಾರ್ಡ್ಸ್ ಸ್ಕಾಲರ್‌ಶಿಪ್ ಸೇರಿದಂತೆ ಡಿಎಫ್‌ಎಟಿಯ ಪ್ರಾದೇಶಿಕ ಮತ್ತು ಜಾಗತಿಕ ನಿಧಿ ಆಧಾರಿತ ಕಾರ್ಯಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ನೀಡುವ ನೆರವು ಮುಂದುವರಿಯುತ್ತದೆ’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News