ಇಂದು ಪೌರತ್ವ ತಿದ್ದುಪಡಿ ಮಸೂದೆ ಮಂಜೂರು ಸಾಧ್ಯತೆ

Update: 2019-12-19 05:10 GMT

ಹೊಸದಿಲ್ಲಿ, ಡಿ. 3: ಪೌರತ್ವ ತಿದ್ದುಪಡಿ ಮಸೂದೆ ಬುಧವಾರ ಬೆಳಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಮಂಜೂರಾಗುವ ಸಾಧ್ಯತೆ ಇದೆ.

 ಧಾರ್ಮಿಕ ಕಿರುಕುಳ ಎದುರಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ಥಾನದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವಂತೆ ಕೋರುವ ಪೌರತ್ವ ಮಸೂದೆ ಕುರಿತ ಪ್ರತಿಪಕ್ಷದ ಟೀಕೆಯನ್ನು ತಿರಸ್ಕರಿಸಿರುವ ರಾಜ್‌ನಾಥ್ ಸಿಂಗ್, ಬಿಜೆಪಿ ಯಾವಾಗಲೂ ದೇಶ ಹಾಗೂ ದೇಶದ ಜನರನ್ನು ಒಗ್ಗೂಡಿಸಲು ಕಾರ್ಯ ನಿರ್ವಹಿಸುತ್ತದೆ ಎಂದರು.

ನೆರೆಯ ಮೂರು ದೇಶಗಳು ಮುಖ್ಯವಾಗಿ ಇಸ್ಲಾಂ ರಾಷ್ಟ್ರಗಳು. ಆದುದರಿಂದ ಅಲ್ಲಿ ಧಾರ್ಮಿಕ ದಬ್ಬಾಳಿಕೆಗೆ ಒಳಗಾಗುತ್ತಿರುವವರು ಮುಸ್ಲಿಮೇತರರೇ ಹೊರತು ಮುಸ್ಲಿಮರಲ್ಲ ಎಂದು ಸಿಂಗ್ ಹೇಳಿದರು.

ಕೇಂದ್ರ ಸಂಪುಟ ಬುಧವಾರ ಮುಂಜೂರು ಮಾಡುವ ಸಾಧ್ಯತೆ ಇರುವ ಪೌರತ್ವ ಮಸೂದೆಯನ್ನು ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸುವ ಸಂದರ್ಭ ಸಂಸದರು ದೊಡ್ಡ ಸಂಖ್ಯೆಯಲ್ಲಿ ಹಾಜರಿರಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News