ಗಡ್ಡ ಧರಿಸಿದ್ದಕ್ಕಾಗಿ ಹೊಟೇಲ್‌ನಲ್ಲಿ ಉದ್ಯೋಗ ನಿರಾಕರಣೆ , ಕಾನೂನು ಸಮರದಲ್ಲಿ ಸಿಖ್ ವ್ಯಕ್ತಿಗೆ ಗೆಲುವು

Update: 2019-12-05 16:45 GMT

ಲಂಡನ್,ಡಿ.4: ಲಂಡನ್‌ನ ವಿಲಾಸಿ ಕ್ಲಾರಿಜ್ ಹೊಟೇಲ್‌ನಲ್ಲಿ ಉದ್ಯೋಗಿಗಳು ಗಡ್ಡಧರಿಸಬಾರದೆಂಬ ಸಂಸ್ಥೆಯ ನಿಯಮದ ಹಿನ್ನೆಲೆಯಲ್ಲಿ ಉದ್ಯೋಗ ನಿರಾಕರಿಸಲ್ಪಟ್ಟ ಸಿಖ್ಖ್ ವ್ಯಕ್ತಿಗೆ 7 ಸಾವಿರ ಪೌಂಡ್ ಹಣವನ್ನು ಪರಿಹಾರವಾಗಿ ನೀಡಲಾಗಿದೆ.

ಇಂಗ್ಲೆಂಡ್‌ನ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಉದ್ಯೋಗಿಗಳು ಗಡ್ಡ ಹಾಗೂ ಉದ್ದಕೂದಲು ಬಿಡಬಾರದೆಂಬ ನೀತಿಯನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲೆಮೆಂಟ್ಸ್ ಪರ್ಸೊನೆಲ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ತನ್ನ ನೇಮಕಾತಿಗೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ಮೂಲದ ಕೇಶಧಾರಿ ಸಿಖ್ಖ್ ರಮೇಶ್ ಸೇಠಿ ಎಂಬವರು ಬ್ರಿಟನ್‌ನ ಉದ್ಯೋಗ ನ್ಯಾಯಾದೀಕರಣದ ಮೆಟ್ಟಲೇರಿದ್ದರು.

ಆದಾಗ್ಯೂ, ಸಿಖ್ಖರಿಗೆ ಅವರ ಧಾರ್ಮಿಕ ಕಟ್ಟುಪಾಡುಗಳ ನೆಲೆಯಲ್ಲಿ ವಿನಾಯಿತಿಯನ್ನು ನೀಡಲಾಗಿದೆಯೇ ಎಂಬ ಬಗ್ಗೆ ನಿರ್ಧರಿಸಲು ಹೊಟೇಲ್ ಆಡಳಿತ ಮಂಡಳಿಗಳ ಜೊತೆ ತಾನು ಸಮಾಲೋಚಿಸಿಲ್ಲವೆಂದು ನ್ಯಾಯಾ ಧೀಕರಣದ ನ್ಯಾಯಾಧೀಶ ಹೊಲಿ ಸ್ಟಾಟ್ ತಿಳಿಸಿದ್ದಾರೆ.

 ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಖ್ ಉದ್ಯೋಗಿಗಳು ಧಾರ್ಮಿಕ ಕಾರಣಗಳಿಗಾಗಿ ಕ್ಷೌರ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ನೇಮಕಾತಿ ಸಂಸ್ಥೆಯು ತನ್ನ ಗ್ರಾಹಕ ಕಂಪೆನಿಗಳಿಗೆ ತಿಳಿಸಿರುವ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲವೆಂದು ನ್ಯಾಯಾಧೀಶ ಸ್ಟೌಟ್ ತಿಳಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಹಾನಿಯುಂಟು ಮಾಡಿದ ಹಿನ್ನೆಲೆಯಲ್ಲಿ ಸಿಖ್ ಧರ್ಮೀಯರಾದ ರಮೇಶ್ ಸೇಠಿಗೆ ಒಟ್ಟು 102.17 ಪೌಂಡ್ ಪರಿಹಾರಧನ ನೀಡುವಂತೆ ನಾಯಾಧೀಶೆ ಸೂಚನೆ ನೀಡಿದ್ದಾರೆ.

 ಕಾನೂನು ಸಮರದಲ್ಲಿ ತನಗೆ ದೊರೆತ ಪರಿಹಾರಧನವನ್ನು ಬ್ರಿಟನ್‌ನಲ್ಲಿ ಮುಖ್ಯ ಕಾರ್ಯಾಲಯವಿರುವ ಸಿಖ್ ಸೇವಾ ಸಂಸ್ಥೆ ಖಾಲ್ಸಾ ಏಡ್‌ಗೆ ನೀಡಲು ರಮೇಶ್ ಸೇಠಿ ಯೋಚಿಸುತ್ತಿದ್ದಾರೆಂದು ಡೈಲಿ ಟೆಲ್ಗ್ರಿಗ್ರಾಫ್ ವರದಿ ಮಾಡಿದೆ.

  34 ವರ್ಷ ವಯಸ್ಸಿನ ರಮೇಶ್ ಸೇಠಿ ಅವರು 2017ರ ನವೆಂಬರ್‌ನಲ್ಲಿ ನಡೆದ ಸಿಬ್ಬಂದಿ ನೇಮಕಾತಿ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಗಡ್ಡ ಧರಿಸಿರುವ ಕಾರಣ ಆರೋಗ್ಯ ಮತ್ತು ಸುರಕ್ಷತಾ ಕಾರಣಗಳಿಗಾಗಿ ಅವರಿಗೆ ಹೊಟೇಲ್‌ನಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲವಂದು ಆದೇಶಿಸಿತುತ ಇದನ್ನು ಪ್ರಶ್ನಿಸಿ ರಮೇಶ್ ಸೇಠಿ ನ್ಯಾಯಾಲಯದ ಮೆಟ್ಟಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News