ಮಾಲ್ದೀವ್ಸ್‌ನಲ್ಲಿ ರೂಪೇಗೆ ಚಾಲನೆ: ಭಾರತದಿಂದ ಗಸ್ತು ನೌಕೆಯ ಉಡುಗೊರೆ

Update: 2019-12-05 16:57 GMT

ಮಾಲೆ,ಡಿ.5: ನೆರೆಹೊರೆಯವರಿಗೆ ಆದ್ಯತೆ ಎಂಬ ತನ್ನ ನೀತಿಯನ್ನು ಮುನ್ನಡೆಸುವ ಪ್ರಯತ್ನವಾಗಿ ಭಾರತವು ದ್ವೀಪರಾಷ್ಟ್ರ ಮಾಲ್ದೀವ್ಸ್‌ಗೆ ಒಂದು ಗಸ್ತು ನೌಕೆಯನ್ನು ಉಡುಗೊರೆಯಾಗಿ ನೀಡಿದೆ ಹಾಗೂ ಅಲ್ಲಿ ರೂಪೇ ಕಾರ್ಡ್ ವ್ಯವಸ್ಥೆಗೆ ಚಾಲನೆ ನೀಡಿದೆೆ.

  ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹೀಂ ಮುಹಮ್ಮದ್ ಸಾಲಿಹ್ ನಡುವೆ ನಡೆದ ವಿಡಿಯೋ ಕಾನ್ಫರೆನ್ಸ್‌ನ ವೇಳೆ ಈ ಬಾಂಧವ್ಯವೃದ್ಧಿ ಕ್ರಮಗಳನ್ನು ಪ್ರಕಟಿಸಲಾಯಿತು.

ಭಾರತವು ಸ್ವದೇಶಿ ನಿರ್ಮಿತ ಕಾಮಿಯಾಬ್ ಗಸ್ತು ನೌಕೆ ‘ಕಾಮಿಯಾಬ್’ ಅನ್ನು ಮಾಲ್ಡೀವ್ಸ್‌ನ ರಾಷ್ಟ್ರೀಯ ಭದ್ರತಾಪಡೆಗೆ ಉಡುಗೊರೆಯಾಗಿ ನೀಡಿದೆ. ಭಾರತದಲ್ಲಿ ತರಬೇತುಗೊಂಡ ಎಂಟು ಮಂದಿ ಎಂಎನ್‌ಡಿಎಫ್ ಸಿಬ್ಬಂದಿ ಈ ನೌಕೆಯನ್ನು ನಿರ್ವಹಿಸಲಿದ್ದಾರೆ. ನೌಕಾಯಾನ ಭದ್ರತೆಯನ್ನು ಬಲಪಡಿಸಲು ಮಾಲ್ಡೀವ್ಸ್‌ಗೆ ಈ ನೌಕೆಯು ಒಂದು ಅಮೂಲ್ಯ ಆಸ್ತಿಯಾಗಲಿದೆಯೆಂದು ಮೂಲಗಳು ಬಣ್ಣಿಸಿವೆ. ಇದರ ಜೊತೆಗೆ ಈ ನೌಕೆಯಿಂದಾಗಿ ಮಾಲ್ಡೀವ್ಸ್‌ನ ಸಾಗರ ಆರ್ಥಿಕತೆ ಬಲಿಷ್ಠಗೊಳ್ಳಲಿದೆ ಹಾಗೂ ಪ್ರವಾಸೋದ್ಯಮ ಸುರಕ್ಷಿತವಾಗಲಿದೆಯೆಂದು ಅವು ಹೇಳಿವೆ.

ಉಭಯ ದೇಶಗ ಪ್ರತಿನಿಧಿಗಳು ಮೂರು ತಿಳುವಳಿಕಾ ಒಪ್ಪಂದಗಳಿಗೆ ಸಹಿಹಾಕಿದ್ದು ಅವುಗಳಲ್ಲಿ ಮಾಲ್ದೀವ್ಸ್‌ನತತ ಅಡ್ಡು ನಗರದ ಆಸುಆಸಿನಲ್ಲಿ ಮೀನುಗಾರಿಕಾ ಸಂಸ್ಕರಣಾ ಸ್ಥಾವರಗಳ ಸ್ಥಾಪನೆಯೂ ಒಳಗೊಂಡಿದೆ.

ಭಾರತವು ಇತ್ತೀಚೆಗೆ ಮಾಲ್ದೀವ್ಸ್‌ಗೆ 2500 ಎಲ್‌ಇಡಿ ದೀಪಗಳನ್ನು ದೇಣಿಗೆಯಾಗಿ ನೀಡಿದ್ದು, ಅವುಗಳನ್ನು ರಾಜಧಾನಿ ಮಾಲೆಯಲ್ಲಿ ತೀರಾ ಇತ್ತೀಚೆಗೆ ಸ್ಥಾಪಿಸಲಾಗಿದೆ. ಇದರಿಂದಾಗಿ ಆ ದೇಶಕ್ಕೆ ಪ್ರತಿ ವರ್ಷ ಸುಮಾರು 8.35 ಲಕ್ಷ ಮಾಲ್ದೀವ್ಸ್ ರೂ. ವೌಲ್ಯದ ಹಣ ಉಳಿತಾಯವಾಗಲಿದೆ.

 ಈ ವಾರದಿಂದ ಮಾಲ್ದೀವ್ಸ್‌ಗೆ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ವಿಮಾನನಿಲ್ದಾಣಗಳಿಂದ ನೇರ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ. ರೂಪೇ ವ್ಯವಸ್ತೆಯ ಆಳವಡಿಕೆಯಿದಾಗಿ ಮಾಲ್ದೀವ್ಸ್‌ಗೆ ಭಾರತೀಯರ ಸಂಚಾರ ಸುಗಮವಾಗಲಿದೆ’’ಎಂದು ನರೇಂದ್ರ ಮೋದಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News