ಪಾಕ್‌ನಿಂದ ಬಳಕೆಯಾಗದ ಸರಕಾರಿ ಸೊತ್ತುಗಳ ಮಾರಾಟ

Update: 2019-12-05 17:01 GMT

ಇಸ್ಲಾಮಾಬಾದ್,ಡಿ.5: ವಿದೇಶಿ ಹಾಗೂ ಪಾಕಿಸ್ತಾನಿ ಹೂಡಿಕೆದಾರರನ್ನು ಆಕರ್ಷಿಸಲು ಪಾಕ್ ಸರಕಾರವು ಬಳಕೆಯಾಗದೆ ಇರುವ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ಜರ್ಝರಿತಗೊಂಡಿರುವ ಪಾಕಿಸ್ತಾನವು ತನ್ನ ಆರ್ಥಿಕತೆಯನು ಸುಧಾರಿಸಲು ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಣ ಹೂಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಂತೆಯೇ ಅದು ಈ ಕ್ರಮಗಳನ್ನು ಘೋಷಿಸಿದೆ.

ಪಾಕ್ ಸರಕಾರಕ್ಕೆ ಸೇರಿದ ಬಳಕೆಯಾಗದೆ ಉಳಿದಿರುವ ಆಸ್ತಿಗಳು ಹಾಗೂ ಸೊತ್ತುಗಳನ್ನು ದುಬೈ ಎಕ್ಸ್‌ಪೊದಲ್ಲಿ ಮಾರಾಟಕ್ಕಿಡಲಾಗುವುದು ಹಾಗೂ ಈ ಪ್ರಕ್ರಿಯೆಯ ಮೂಲಕ ಸೃಷ್ಟಿಯಾದ ಹಣವನ್ನು ಶಿಕ್ಷಣ, ಆರೋಗ್ಯ, ಆಹಾರ ಹಾಗೂ ವಸತಿ ಸೇರದಂತೆ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ವ್ಯಯಿಸಲಾಗುವುದು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಬಳಕೆಯಾಗದೆ ಉಳಿದಿರುವ ಈ ಆಸ್ತಿಗಳನ್ನು ವಿದೇಶಿ ಹಾಗೂ ಪಾಕಿಸ್ತಾನಿ ಹೂಡಿಕೆದಾರರು ಖರೀದಿಸುವಂತೆ ಮಾಡುವುಕ್ಕಾಗಿ ಅವನ್ನು ದುಬೈ ಎಕ್ಸ್‌ಪೊದಲ್ಲಿ ಮಾರಾಟಕ್ಕಿಡಲಾಗುವುದು ಎಂದು ಪಾಕ್ ಸರಕಾರದ ಖಾಸಗೀಕರಣ ಕಾರ್ಯರ್ಶಿ ರಿಝ್ವಾನ್ ಮಲಿಕ್ ತಿಳಿಸಿದ್ದಾರೆ.

ದುರದೃಷ್ಟವಶಾತ್ ಈ ಅಮೂಲ್ಯ ಆಸ್ತಿಗಳನ್ನು ಬಳಕೆ ಮಾಡದೆ ಇರುವ ಮೂಲಕ ಹಿಂದಿನ ಸರಕಾರಗಳು ಘೋರ ನಿರ್ಲಕ್ಷವನ್ನು ಎಸಗಿವೆ. ಕೋಟ್ಯಾಂತರ ರೂಪಾಯಿ ವೌಲ್ಯದ ಸೊತ್ತುಗಳು ಇರುವ ಹೊರತಾಗಿಯೂ ವಿವಿಧ ಸರಕಾರಿ ಇಲಾಖೆಗಳು ಪ್ರತಿರ್ಷ ನೂರಾರು ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿವೆಯೆಂದು ಖಾನ್ ತಿಳಿಸಿದ್ದಾರೆ.

ಬಳಕೆಯಾಗದೆ ಇರುವ ಸರಕಾರಿ ಆಸ್ತಿಗಳನ್ನು ಗುರುತಿಸುವಲ್ಲಿ ಅಡೆತಡೆಗಳನನ್ನು ಸರಕಾರಿ ಅಧಿಕಾರಿಗಳು ಸೃಷ್ಟಿಸುತ್ತಿರು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News