ಹಿರಿಯ ನಾಗರಿಕರ ಮಸೂದೆಗೆ ಸಂಪುಟದ ಅಸ್ತು

Update: 2019-12-05 18:15 GMT

ಹೊಸದಿಲ್ಲಿ,ಡಿ.5: ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಅವರ ಮೂಲ ಅಗತ್ಯಗಳು,ಸುರಕ್ಷತೆ ಮತ್ತು ಭದ್ರತೆ, ಸಂವಿಧಾನದಡಿ ಖಾತರಿ ಪಡಿಸಲಾಗಿರುವ ಹಕ್ಕು ಇತ್ಯಾದಿಗಳು ದೊರೆಯುವಂತೆ ಮಾಡುವ ಉದ್ದೇಶವನ್ನು ಹೊಂದಿರುವ ಪೋಷಕರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ (ತಿದ್ದುಪಡಿ) ಮಸೂದೆ 2019ಕ್ಕೆ ಕೇಂದ್ರ ಸಂಪುಟವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ.

2007ರ ಪೋಷಕರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಈ ಮಸೂದೆಯು 10,000 ರೂ.ಗಳ ಜೀವನಾಂಶ ಮಿತಿಯನ್ನು ತೆಗೆದುಹಾಕುತ್ತದೆ ಮತ್ತು 80 ವರ್ಷಕ್ಕಿಂತ ಮೇಲಿನ ಹಿರಿಯ ನಾಗರಿಕರ ಅರ್ಜಿಗಳಿಗೆ ಆದ್ಯತೆ ನೀಡುವ ಪ್ರಸ್ತಾವವನ್ನು ಒಳಗೊಂಡಿದೆ. ವೃದ್ಧಾಶ್ರಮಗಳು ಮತ್ತು ಹೋಮ್ ಕೇರ್ ಸರ್ವಿಸ್ ಸಂಸ್ಥೆಗಳ ನೋಂದಣಿಯೊಂದಿಗೆ ವೃದ್ಧಾಶ್ರಮಗಳಲ್ಲಿ ಕನಿಷ್ಠ ಗುಣಮಟ್ಟ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲು ಅದು ಪ್ರಸ್ತಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News