ಎಡಿಬಿಯಿಂದ ಪಾಕ್‌ಗೆ 9,269 ಕೋಟಿ ರೂಪಾಯಿ ಸಾಲ

Update: 2019-12-06 16:41 GMT

ಇಸ್ಲಾಮಾಬಾದ್, ಡಿ. 6: ಪಾಕಿಸ್ತಾನದ ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಆಧರಿಸಲು ಹಾಗೂ ನಿಧಾನಗತಿಯ ಆರ್ಥಿಕತೆಗೆ ಚೈತನ್ಯ ನೀಡಲು ಆ ದೇಶಕ್ಕೆ ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಶುಕ್ರವಾರ 1.3 ಬಿಲಿಯ ಡಾಲರ್ (ಸುಮಾರು 9,269 ಕೋಟಿ ಭಾರತೀಯ ರೂಪಾಯಿ) ಸಾಲ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಬೆಳವಣಿಗೆ ಸ್ಥಗಿತಗೊಂಡಿದ್ದು, ವಿದೇಶಿ ಕರೆನ್ಸಿಯ ಮೀಸಲಿನ ಪೂರೈಕೆಯಲ್ಲಿ ಕಡಿತವಾಗಿತ್ತು. ಹಾಗಾಗಿ ಅದು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯು ಪಾಕಿಸ್ತಾನಕ್ಕೆ ನೀಡಬಹುದಾದ ಸಾಲದ ಪ್ರಮಾಣವನ್ನು ತಗ್ಗಿಸುವ ಪ್ರಯತ್ನವಾಗಿ, ರಿಯಾಯಿತಿ ದರದಲ್ಲಿ ಸಾಲಗಳನ್ನು ನೀಡುವಂತೆ ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿ ಇಮ್ರಾನ್ ಖಾನ್ ಚೀನಾ ಮತ್ತು ಸೌದಿ ಅರೇಬಿಯ ಮುಂತಾದ ಮಿತ್ರ ದೇಶಗಳಿಗೆ ಮನವಿ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News