ಇರಾನ್‌ನಲ್ಲಿ ಪೊಲೀಸರಿಂದ ಸಾವಿರಕ್ಕೂ ಅಧಿಕ ಪ್ರತಿಭಟನಕಾರರ ಹತ್ಯೆ: ಆರೋಪ

Update: 2019-12-06 16:26 GMT

ವಾಶಿಂಗ್ಟನ್, ಡಿ. 6: ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯನ್ನು ವಿರೋಧಿಸಿ ಇರಾನ್‌ನಲ್ಲಿ ನವೆಂಬರ್ ಮಧ್ಯ ಭಾಗದಲ್ಲಿ ಪ್ರತಿಭಟನೆಗಳು ಆರಂಭಗೊಂಡಂದಿನಿಂದ 1,000ಕ್ಕೂ ಅಧಿಕ ಜನರನ್ನು ಅಲ್ಲಿನ ಭದ್ರತಾ ಪಡೆಗಳು ಕೊಂದಿರಬಹುದು ಎಂದು ಅಮೆರಿಕದ ವಿಶೇಷ ಇರಾನ್ ಪ್ರತಿನಿಧಿ ಬ್ರಯಾನ್ ಹುಕ್ ಗುರುವಾರ ಹೇಳಿದ್ದಾರೆ.

ಇರಾನ್‌ನಿಂದ ಸತ್ಯಾಂಶಗಳು ಹೊರಬೀಳುತ್ತಿದ್ದು, ಭದ್ರತಾ ಪಡೆಗಳ ಗುಂಡಿನಿಂದಾಗಿ ಹಲವು ಸಾವಿರ ಮಂದಿ ಗಾಯಗೊಂಡಿದ್ದಾರೆ ಹಾಗೂ ಕನಿಷ್ಠ 7,000 ಮಂದಿಯನ್ನು ಬಂಧಿಸಲಾಗಿದೆ ಎಂದು ಇಲ್ಲಿನ ವಿದೇಶಾಂಗ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹುಕ್ ಹೇಳಿದರು.

ಇರಾನ್ ಮೃತಪಟ್ಟವರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಆದರೆ, ಕನಿಷ್ಠ 208 ಪ್ರತಿಭಟನಕಾರರ ಹತ್ಯೆಯ ಬಗ್ಗೆ ತನ್ನಲ್ಲಿ ಪುರಾವೆಯಿದೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News