ಸಿಎಂ ಆದ ಬಳಿಕ ಉದ್ಧವ್ ಠಾಕ್ರೆ- ಪ್ರಧಾನಿ ಮೋದಿ ಮೊದಲ ಭೇಟಿ

Update: 2019-12-07 03:59 GMT

ಪುಣೆ : ಬಿಜೆಪಿಯ ಸಖ್ಯ ತೊರೆದು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಳೆಸಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಇಲ್ಲಿನ ಲೋಹೆಗಾಂವ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಉಭಯ ಗಣ್ಯರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸ್ವಲ್ಪಕಾಲ ಮಾತುಕತೆ ನಡೆಸಿದರು. ಪೊಲೀಸ್ ಮಹಾನಿರ್ದೇಶಕರ ಹಾಗೂ ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಆಗಮಿಸಿದ್ದರು. ಬಳಿಕ ಮೋದಿ ತಮ್ಮ ರಾತ್ರಿ ವಾಸ್ತವ್ಯಕ್ಕಾಗಿ ರಾಜಭವನಕ್ಕೆ ತೆರಳಿದರೆ, ಠಾಕ್ರೆ ಮುಂಬೈಗೆ ಮರಳಿದರು.

ನಾಟಕೀಯ ತಿರುವುಗಳನ್ನು ಕಂಡ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ ರೂಪುಗೊಂಡ ಬಳಿಕ ನಡೆದ ಉಭಯ ಗಣ್ಯರ ಮೊದಲ ಭೇಟಿಗೆ, ಪ್ರಧಾನಿಯನ್ನು ಸ್ವಾಗತಿಸಲು ಆಗಮಿಸಿದ್ದ ಗೃಹಸಚಿವ ಅಮಿತ್ ಶಾ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯಪಾಲ ಭಗತ್ ಸಿಇಂಗ್ ಕೋಶಿಯಾರಿ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News