'ಈಗ ಏಕೆ ಬಂದಿದ್ದೀರಿ?': ಉನ್ನಾವೊ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಸಚಿವರ ವಿರುದ್ಧ ಸ್ಥಳೀಯರ ಆಕ್ರೋಶ

Update: 2019-12-07 13:30 GMT
Photo: www.ndtv.com

ಲಕ್ನೋ: ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಮೃತಪಟ್ಟ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಇಂದು ಆದಿತ್ಯನಾಥ್ ಸರಕಾರದ ಇಬ್ಬರು ಸಚಿವರು ಭೇಟಿ ನೀಡಿದ್ದು, ಈ ಸಂದರ್ಭ ಸ್ಥಳೀಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು.

ಸಂತ್ರಸ್ತೆಯ ಮನೆಗೆ ಭೇಟಿ ನೀಡುವಂತೆ ಆದಿತ್ಯನಾಥ್ ಸಚಿವರಾದ ಕಮಲ್ ರಾಣಿ ವರುಣ್ ಮತ್ತು ಸ್ವಾಮಿ ಪ್ರಸಾದ್ ಮೌರ್ಯಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಸಚಿವರು ಸಂತ್ರಸ್ತೆ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು "ಈಗ ಏಕೆ ಬಂದಿದ್ದೀರಿ?" ಎಂದು ಬೊಬ್ಬಿಟ್ಟರು.

ಭೇಟಿ ಬಳಿಕ ಮಾತನಾಡಿದ ಸಚಿವ ಮೌರ್ಯ, "ಸಂತ್ರಸ್ತೆಯ ಕುಟುಂಬ ಯಾವ ತನಿಖೆಯನ್ನು ಬಯಸುತ್ತದೆಯೋ ಅದನ್ನು ಮಾಡಲು ನಾವು ಸಿದ್ಧ. ಸಂತ್ರಸ್ರೆ ಯಾರೆಲ್ಲರ ಹೆಸರುಗಳನ್ನು ಹೇಳಿದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾವ ತಪ್ಪಿತಸ್ಥರನ್ನೂ ಬಿಡುವುದಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News