ಬ್ಯಾಂಕ್ ಗ್ರಾಹಕರ ಗಮನಕ್ಕೆ: ಡಿ.16ರಿಂದ ಮಹತ್ವದ ಬದಲಾವಣೆ

Update: 2019-12-07 14:44 GMT

ಮುಂಬೈ,ಡಿ.7: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಕ್ರಮವಾಗಿ ರಾಷ್ಟ್ರೀಯ ವಿದ್ಯುನ್ಮಾನ ಹಣ ವರ್ಗಾವಣೆ (ನೆಫ್ಟ್) ವ್ಯವಸ್ಥೆಯಡಿ ಡಿ.16ರಿಂದ ವಾರದ ಏಳೂ ದಿನ 24 ಗಂಟೆ ಕಾಲ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

24X7 ನೆಫ್ಟ್ ವ್ಯವಸ್ಥೆಯು ರಜಾದಿನಗಳು ಸೇರಿದಂತೆ ವರ್ಷದ ಎಲ್ಲ ದಿನಗಳಲ್ಲಿಯೂ ಲಭ್ಯವಿರಲಿದೆ.

ಈಗ ಪ್ರತಿ ಗಂಟೆಗೊಮ್ಮೆ ನೆಫ್ಟ್ ವಹಿವಾಟುಗಳನ್ನು ವಿಲೇವಾರಿಗೊಳಿಸಲಾಗುತ್ತಿದೆ. ವಾರದ ದಿನಗಳಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಾಗೂ ಮೊದಲ ಮತ್ತು ಮೂರನೇ ಶನಿವಾರಗಳಂದು ಬೆಳಿಗ್ಗೆ ಎಂಟು ಗಂಟೆಯವರೆಗೆ ಈ ಪ್ರಕ್ರಿಯೆ ನಡೆಯುತ್ತಿದೆ.

ನೂತನ ವ್ಯವಸ್ಥೆಯಂತೆ ಡಿ.15ರಂದು ರಾತ್ರಿ 12:30ರ ಬಳಿಕ ಮೊದಲ ನೆಫ್ಟ್ ವಿಲೇವಾರಿ ನಡೆಯಲಿದೆ ಎಂದು ತಿಳಿಸಿರುವ ಆರ್‌ಬಿಐ,ವಹಿವಾಟು ಇತ್ಯರ್ಥಗೊಂಡ ಎರಡು ಗಂಟೆಗಳಲ್ಲಿ ಫಲಾನುಭವಿಯ ಖಾತೆಗೆ ಹಣ ಜಮೆಯಾಗುವ ಹಾಲಿ ವ್ಯವಸ್ಥೆಯು ಮುಂದುವರಿಯಲಿದೆ ಎಂದು ಹೇಳಿದೆ. ನೆಫ್ಟ್ ಮೂಲಕ ಎರಡು ಲ.ರೂ.ವರೆಗೆ ಹಣವನ್ನು ವರ್ಗಾವಣೆಗೊಳಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News