ಆಟೋ ಚಾಲಕನಿಂದ 5ರ ಬಾಲಕಿ ಮೇಲೆ ಅತ್ಯಾಚಾರ

Update: 2019-12-07 14:52 GMT

ದರ್ಭಂಗಾ,ಡಿ.7: ಆಟೋ ಚಾಲಕನೋರ್ವ ಐದರ ಹರೆಯದ ಬಾಲಕಿಯನ್ನು ‘ಜಾಯ್ ರೈಡ್’ಗೆಂದು ತನ್ನ ಆಟೋದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ನಿರ್ಜನ ಸ್ಥಳವೊಂದರಲ್ಲಿ ಎಸೆದು ಹೋದ ಅಮಾನುಷ ಘಟನೆಯು ಶುಕ್ರವಾರ ತಡರಾತ್ರಿ ದರ್ಭಂಗಾ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಖರುವಾ ಮೋರೆ ಎಂಬಲ್ಲಿ ನಡೆದಿದೆ.

ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆರೋಪಿ ಸಾಹ್ನಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಬಾಬುರಾಮ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಸಂತ್ರಸ್ತ ಬಾಲಕಿ ಮೂರರ ಹರೆಯದ ಇನ್ನೋರ್ವ ಬಾಲಕಿಯೊಂದಿಗೆ ಆಟವಾಡುತ್ತಿದ್ದು,ಇಬ್ಬರೂ ಸಮೀಪದಲ್ಲಿ ನಿಂತಿದ್ದ ಸಾಹ್ನಿಯ ಆಟೋ ಹತ್ತಿದ್ದರು. ‘ಜಾಯ್ ರೈಡ್’ಗೆಂದು ಕರೆದೊಯ್ದ ಆತ ಮಾರ್ಗಮಧ್ಯೆ ಮೂರರ ಹರೆಯದ ಬಾಲಕಿಯನ್ನು ಕೆಳಕ್ಕಿಳಿಸಿದ್ದ ಎಂದರು.

ಪಟ್ನಾದಲ್ಲಿ ಉಪ ಮುಖ್ಯಮಂತ್ರಿ ಸುಶೀಲ ಕುಮಾರ ಮೋದಿ ಅವರು ಘಟನೆಯ ಕುರಿತು ಸುದ್ದಿಗಾರರ ಪ್ರಶ್ನೆಗಳಿಂದ ನುಣುಚಿಕೊಂಡರು. ಪ್ರತಿಪಕ್ಷಗಳ ನಾಯಕರು ಈ ಘಟನೆಯ ಬಗ್ಗೆ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News