ಹೈಕೋರ್ಟ್ ಮಾಜಿ ನ್ಯಾ.ಕಮಾಲ್ ಪಾಷಾರ ಭದ್ರತೆಯನ್ನು ಹಿಂದೆಗೆದ ಕೇರಳ ಸರಕಾರ

Update: 2019-12-07 15:22 GMT

ಕೊಚ್ಚಿ,ಡಿ.7: ವಿವಿಧ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸಿಪಿಎಂ ನೇತೃತ್ವದ ರಾಜ್ಯ ಸರಕಾರದ ವಿಫಲವಾಗಿದೆ ಎಂದ ಕೇರಳ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ನ್ಯಾ.ಕಮಾಲ್ ಪಾಷಾ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಕೇರಳ ಪೊಲೀಸರು ಶನಿವಾರ ದಿಢೀರ್ ಆಗಿ ಹಿಂದೆಗೆದುಕೊಂಡಿದ್ದಾರೆ. ಅವರಿಗೆ ನಾಲ್ವರು ಸಶಸ್ತ್ರ ಪೊಲೀಸರಿಂದ ಭದ್ರತೆಯನ್ನು ಒದಗಿಸಲಾಗಿತ್ತು.

ಶುಕ್ರವಾರ ಗೃಹ ಕಾರ್ಯದರ್ಶಿಗಳ ಮಟ್ಟದಲ್ಲಿ ಭದ್ರತೆಯನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನ್ಯಾ.ಪಾಷಾ,ತಾನು ಕೇರಳದಲ್ಲಿಯ ಐಸಿಸ್ ಉಗ್ರರಿಂದ ಬೆದರಿಕೆಯನ್ನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿಯೇ ಅವಸರವಸರವಾಗಿ ತನ್ನ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಇತ್ತೀಚಿಗೆ ಅಟ್ಟಪಾಡಿಯಲ್ಲಿ ನಾಲ್ವರು ಮಾವೋವಾದಿಗಳ ಎನ್‌ಕೌಂಟರ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಸರಕಾರದ ನೀತಿಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ತನ್ನ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅರೋಪಿಸಿದ ಅವರು,ಸರಕಾರದ ತಪ್ಪು ನೀತಿಗಳ ವಿರುದ್ಧ ತನ್ನ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News