ಗಾಂಧೀಜಿಯ ಭಾಷಣದ ಹಸ್ತಪ್ರತಿ ಹರಾಜಿಗೆ

Update: 2019-12-07 17:08 GMT

ವಾಶಿಂಗ್ಟನ್, ಡಿ. 7: ಮಹಾತ್ಮಾ ಗಾಂಧೀಜಿಯ ಕೈಬರಹದ ಹಸ್ತಪ್ರತಿಯೊಂದನ್ನು ಮಾರಾಟಕ್ಕೆ ಇಟ್ಟಿರುವುದಾಗಿ ಅಮೆರಿಕದ ‘ರಾಬ್ ಕಲೆಕ್ಷನ್’ ಪ್ರಕಟಿಸಿದೆ. ಇದು ಸಾರ್ವಜನಿಕವಾಗಿ ಲಭ್ಯವಿರುವ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿ ಎಂಬುದಾಗಿ ಭಾವಿಸಲಾಗಿದೆ.

ಇದು 1948 ಜನವರಿ 22ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಅವರು ಮಾಡಿದ ಭಾಷಣದ ಹಸ್ತಪ್ರತಿಯಾಗಿದೆ. ಭಾರತ ವಿಭಜನೆ ಹಾಗೂ ಬಳಿಕ ಗಡಿಯ ಎರಡೂ ಭಾಗಗಳಲ್ಲಿ ನಡೆದ ಕೋಮು ಗಲಭೆಗಳ ಹಿನ್ನೆಲೆಯಲ್ಲಿ, ಹಿಂದೂ-ಮುಸ್ಲಿಮ್ ಸಾಮರಸ್ಯಕ್ಕಾಗಿ ಅವರು ನಡೆಸಿದ ಆಮರಣಾಂತ ಉಪವಾಸದ ಬಳಿಕ ಅವರು ಮಾಡಿದ ಮೊದಲ ಭಾಷಣ ಅದಾಗಿತ್ತು.

ಈ ಭಾಷಣ ಮಾಡಿದ 8 ದಿನಗಳ ಬಳಿಕ ಗಾಂಧೀಜಿಯ ಹತ್ಯೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News