ದಿಲ್ಲಿ: ಅತ್ಯಂತ ಕಳಪೆ ವರ್ಗದಲ್ಲೇ ಉಳಿದ ವಾಯಗುಣಮಟ್ಟ

Update: 2019-12-07 18:22 GMT
Photo: PTI

ಹೊಸದಿಲ್ಲಿ, ಡಿ.7: ರಾಷ್ಟ್ರೀಯ ರಾಜಧಾನಿಯ ವಾಯುಗುಣಮಟ್ಟ ಅತ್ಯಂತ ಕಳಪೆ ವರ್ಗದಲ್ಲೇ ಉಳಿದಿದ್ದು ಒಟ್ಟು ವಾಯುಗುಣಮಟ್ಟದ ಸೂಚ್ಯಂಕ 388ಕ್ಕೆ ಕುಸಿದಿದೆ. ದೀರ್ಘಕಾಲ ಶ್ರಮದಾಯಕ ಕೆಲಸದಲ್ಲಿ ತೊಡಗಿಕೊಳ್ಳದಂತೆ ವಾಯುಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ವಿಭಾಗ(ಸಫರ್) ಜನರಿಗೆ ಸಲಹೆ ನೀಡಿದೆ.

ಕೆಲಸದ ಮಧ್ಯೆ ಹೆಚ್ಚಿನ ಬಿಡುವು ತೆಗೆದುಕೊಳ್ಳಬೇಕು. ಅಸ್ತಮಾದಿಂದ ಬಳಲುತ್ತಿರುವವರು ತಮ್ಮೊಂದಿಗೆ ಔಷಧವನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಹೃದಯ ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದು ಸಲಹೆ ನೀಡಲಾಗಿದೆ.

ಶನಿವಾರ ದಿಲ್ಲಿಯಲ್ಲಿ ಕನಿಷ್ಟ ತಾಪಮಾನ 8 ಡಿಗ್ರಿ ಸೆಲ್ಶಿಯಸ್, ಗರಿಷ್ಟ ತಾಪಮಾನ 24 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು ತೇವಾಂಶ 46% ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಂತ ಮೇಲ್ಮೈ ಗಾಳಿ ಹಾಗೂ ವಾತಾಯನ ಗುಣಾಂಕದಲ್ಲಿನ ಇಳಿಕೆ ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪುಣೆ, ಮುಂಬೈ ಮತ್ತು ಅಹ್ಮದಾಬಾದ್‌ನಲ್ಲಿ ವಾಯು ಗುಣಮಟ್ಟ ಮಧ್ಯಮ ವರ್ಗದಲ್ಲಿ ಸ್ಥಿರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News