ನೆಹರೂ ಅತಿ ದೊಡ್ಡ ಅತ್ಯಾಚಾರಿ: ಸಾಧ್ವಿ ಪ್ರಾಚಿ ವಿವಾದಾತ್ಮಕ ಹೇಳಿಕೆ

Update: 2019-12-08 14:06 GMT
Photo: PTI

 ಮೀರತ್, ಡಿ. 8: ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ‘ಅತಿದೊಡ್ಡ ಅತ್ಯಾಚಾರಿ’ ಎಂದು ರವಿವಾರ ಕರೆಯುವ ಮೂಲಕ ವಿಶ್ವವಿಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ವಿವಾದ ಸೃಷ್ಟಿಸಿದ್ದಾರೆ.

‘ಭಾರತ ಜಗತ್ತಿನ ಅತ್ಯಾಚಾರದ ರಾಜಧಾನಿ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾಧ್ವಿ ಪ್ರಾಚಿ, ‘‘ನಮ್ಮ ದೇಶ ರಾಮ, ಕೃಷ್ಣ ಜನಿಸಿದ ನಾಡು. ರಾಹುಲ್ ಗಾಂಧಿ ಏನು ಹೇಳುವುದು ? ರಾಮ ಹಾಗೂ ಕೃಷ್ಣ ಸಂಸ್ಕೃತಿಯನ್ನು ನಾಶಗೊಳಿಸಿದ ನೆಹರೂ ಅವರು ಅತಿ ದೊಡ್ಡ ಅತ್ಯಾಚಾರಿ’’ ಎಂದರು.

‘‘ಭಯೋತ್ಪಾದನೆ, ನಕ್ಸಲ್‌ವಾದ, ಭ್ರಷ್ಟಾಚಾರ ಹಾಗೂ ಅತ್ಯಾಚಾರ ನೆಹರೂ ಕುಟುಂಬದ ಕೊಡುಗೆ’’ ಎಂದು ಅವರು ತಿಳಿಸಿದರು.

 ಭಾರತವನ್ನು ಜಗತ್ತಿನ ಅತ್ಯಾಚಾರದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಮಹಿಳೆಯರನ್ನು ರಕ್ಷಿಸಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಇತರ ದೇಶಗಳು ಅಚ್ಚರಿ ಪಡುತ್ತಿವೆ ಎಂದು ರಾಹುಲ್ ಗಾಂಧಿ ಶನಿವಾರ ವಯನಾಡ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News