ಕೊಲಂಬೊ ಬಂದರು ನಗರ ಅಭಿವೃದ್ಧಿಗೆ ಬೆಂಬಲ ಘೋಷಿಸಿದ ಲಂಕಾ ಪ್ರಧಾನಿ

Update: 2019-12-08 16:24 GMT

ಕೊಲಂಬೊ, ಡಿ. 8: ಚೀನಾ ನಿರ್ಮಿಸುತ್ತಿರುವ ಕೊಲಂಬೊ ಬಂದರು ನಗರ ಯೋಜನೆಯನ್ನು ಶ್ರೀಲಂಕಾ ಸರಕಾರ ದೃಢವಾಗಿ ಬೆಂಬಲಿಸುತ್ತದೆ ಹಾಗೂ ಅದರ ಅಭಿವೃದ್ಧಿಯ ಗತಿಯನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ಮಹಿಂದ ರಾಜಪಕ್ಸ ಹೇಳಿದ್ದಾರೆ.

ಕೊಲಂಬೊ ಬಂದರು ನಗರವನ್ನು ಶ್ರೀಲಂಕಾದ ಹೊಸ ವ್ಯಾಪಾರ ಕೇಂದ್ರವನ್ನಾಗಿಸಲು ಸರಕಾರ ಉತ್ಸುಕವಾಗಿದೆ ಎಂದು ಶನಿವಾರ ನಡೆದ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಹೇಳಿದರು.

ನಗರದ 269 ಹೆಕ್ಟೇರ್ ಜಮೀನನ್ನು ಸಮುದ್ರಕ್ಕೆ ಮಣ್ಣು ಹಾಕಿ ತುಂಬಿಸಿ ಸೃಷ್ಟಿಸಲಾಗಿದೆ. ಅದನ್ನು ಕೊಲಂಬೊ ಜಿಲ್ಲೆಯ ಭಾಗ ಎಂಬುದಾಗಿ ಶನಿವಾರ ಅಧಿಕೃತವಾಗಿ ಘೋಷಿಸಲಾಯಿತು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಸ್ಟ್ರೇಲಿಯದ ನಗರ ಸಿಡ್ನಿಯ ಉತ್ತರ ಭಾಗದಲ್ಲಿರುವ ಮ್ಯಾನ್‌ಗ್ರೂವ್ ಪರ್ವತದಲ್ಲಿ ಹಬ್ಬಿರುವ ಬೆಂಕಿಯನ್ನು ನಂದಿಸಲು ರವಿವಾರ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಪ್ರಯತ್ನಿಸುತ್ತಿರುವುದು. ಈ ಪ್ರದೇಶದಲ್ಲಿ ಶುಷ್ಕ ವಾತಾವರಣ ನೆಲೆಸಿದ್ದು, ಕಾಡ್ಗಿಚ್ಚು ಹಬ್ಬಲು ಸಹಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News