×
Ad

ಉನ್ನಾವೊ ಅತ್ಯಾಚಾರ, ಹತ್ಯೆಗೀಡಾದ ಯುವತಿ ಕುಟುಂಬಕ್ಕೆ ಭದ್ರತೆ: ಉತ್ತರಪ್ರದೇಶ ಸರಕಾರ ಭರವಸೆ

Update: 2019-12-08 23:30 IST
Photo: PTI

 ಹೊಸದಿಲ್ಲಿ, ಡಿ. 8: ಉನ್ನಾವೊ ಅತ್ಯಾಚಾರ ಹಾಗೂ ಹತ್ಯೆಗೀಡಾದ ಯುವತಿ ಕುಟುಂಬ 24 ಗಂಟೆಗಳ ಪೊಲೀಸ್ ಭದ್ರತೆ ಪಡೆಯಲಿದೆ. ಅವರಿಗೆ ಶಸ್ತ್ರಾಸ್ತ್ರ ಪರವಾನಿಗೆ ಕೂಡ ನೀಡಲಾಗುವುದು ಎಂದು ಉತ್ತರಪ್ರದೇಶ ಸರಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉನ್ನಾವೊದಲ್ಲಿ ಐವರು ದುಷ್ಕರ್ಮಿಗಳಿಂದ ದಹನಕ್ಕೊಳಗಾದ 24 ವರ್ಷ ಪ್ರಾಯದ ಯುವತಿಯ ಕುಟುಂಬವನ್ನು ಲಕ್ನೋದ ವಿಭಾಗೀಯ ಆಯುಕ್ತ ಮುಖೇಶ್ ಮೆಶ್ರಾಮ್ ಭೇಟಿಯಾಗಿದ್ದಾರೆ.

‘‘ಸಂತ್ರಸ್ತೆಯ ಸಹೋದರಿಗೆ ಭದ್ರತೆ ನೀಡಲು ನಾವು ನಿರ್ಧರಿಸಿದ್ದೇವೆ. ಕುಟುಂಬದ ಇತರ ಸದಸ್ಯರಿಗೆ ಕೂಡ ಭದ್ರತೆ ನೀಡಲಾಗುವುದು. ಸಂತ್ರಸ್ತೆಯ ಸಹೋದರನ ಬೇಡಿಕೆಯಂತೆ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಅನುಮತಿ ನೀಡಲಾಗುವುದು’’ ಎಂದು ಮೆಶ್ರಾಂ ತಿಳಿಸಿದ್ದಾರೆ.

‘‘ನಾವು ಸಂತ್ರಸ್ತೆಯ ಸಹೋದರಿಗೆ ಉದ್ಯೋಗ ಕೂಡ ನೀಡಲಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕುಟುಂಬಕ್ಕೆ ಮನೆ ನೀಡಲಾಗುವುದು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News