ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ: ತ್ರಿಪುರಾದಲ್ಲಿ 48 ಗಂಟೆ ಇಂಟರ್‌ನೆಟ್ ಸೇವೆ ಸ್ಥಗಿತ

Update: 2019-12-19 07:19 GMT
Photo: PTI

ಹೊಸದಿಲ್ಲಿ,/ತ್ರಿಪುರಾ, ಡಿ. 10: ಲೋಕಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತ್ರಿಪುರಾ ಆಡಳಿತ ಇಂಟರ್‌ನೆಟ್ ಸೇವೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.

‘‘ಮಾನು ಹಾಗೂ ಕಾಂಚನ್‌ಪುರ ಪ್ರದೇಶದಲ್ಲಿ ಬುಡಕಟ್ಟು ಜನರು ಹಾಗೂ ಇತರರ ನಡುವೆ ಘರ್ಷಣೆ ನಡೆದ ಬಗ್ಗೆ ವದಂತಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ರಾಜ್ಯದಲ್ಲಿ ಹಿಂಸಾಚಾರ ಉತ್ತೇಜಿಸಲು ನಕಲಿ ಚಿತ್ರಗಳು, ವೀಡಿಯೊಗಳು ಹಾಗೂ ಪಠ್ಯ ಸಂದೇಶಗಳನ್ನು ಹರಡಲು ಟ್ವಿಟ್ಟರ್, ಫೇಸ್‌ಬುಕ್, ಯುಟ್ಯೂಬ್‌ನಂತಹ ಸಾಮಾಜಿಕ ವೇದಿಕೆ ಹಾಗೂ ಎಸ್‌ಎಂಎಸ್, ವಾಟ್ಸ್‌ಆ್ಯಪ್‌ಗಳನ್ನು ಬಳಸುತ್ತಿರುವುದನ್ನು ಗುರುತಿಸಲಾಯಿತು’’ ಎಂದು ತ್ರಿಪುರಾ ಸರಕಾರ ಪತ್ರದಲ್ಲಿ ತಿಳಿಸಿದೆ.

ಈ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಂಗಳವಾರ ಅಪರಾಹ್ನ 2 ಗಂಟೆಯಿಂದ 48 ಗಂಟೆಗಳ ಕಾಲ ಎಸ್‌ಎಂಎಸ್ ಹಾಗೂ ಮೊಬೈಲ್ ಡಾಟಾ ಬಳಕೆಗೆ ನಿಷೇಧ ಹೇರಿದೆ. ಇದು ಪತ್ರಿಕಾ ಸಂದೇಶಗಳಿಗೂ ಅನ್ವಯವಾಗುತ್ತದೆ ಎಂದು ಪತ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News