ಮಹಾದಾಯಿ ವಿವಾದ: ಕೇಂದ್ರಕ್ಕೆ ನೆನಪೋಲೆ ಕಳಿಸಿದ ಗೋವಾ

Update: 2019-12-11 13:19 GMT

ಪಣಜಿ, ಅ.11: ಮಹಾದಾಯಿ ನದಿಯ ಮೇಲೆ ಕರ್ನಾಟಕ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವುದರಿಂದ ವಿನಾಯಿತಿ ನೀಡಿರುವುದನ್ನು ಹಿಂಪಡೆಯಬೇಕು ಎಂಬ ಆಗ್ರಹವನ್ನು ಮತ್ತೊಮ್ಮೆ ನೆನಪಿಸಿ ಕೇಂದ್ರ ಸರಕಾರಕ್ಕೆ ಗೋವಾ ಪತ್ರ ಬರೆದಿದೆ.

ಕರ್ನಾಟಕ ಸರಕಾರಕ್ಕೆ ನೀಡಿರುವ ವಿನಾಯತಿಯನ್ನು ರದ್ದುಗೊಳಿಸಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿ ಗೋವಾ ಸರಕಾರ ಕೇಂದ್ರ ಪರಿಸರ, ಅರಣ್ಯ ಮತ್ತು ಪರಿಸರ ಬದಲಾವಣೆ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್‌ಗೆ ಪತ್ರ ಬರೆದಿದೆ. ಈ ವಿವಾದವನ್ನು 15 ದಿನದೊಳಗೆ ಪರಿಹರಿಸುವುದಾಗಿ ಕೇಂದ್ರ ಸಚಿವರು ನೀಡಿದ್ದ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಅವರನ್ನು ಖುದ್ದು ಭೇಟಿಯಾಗಿ ನೆನಪಿಸಿದ್ದೇನೆ. ಬುಧವಾರ ಅವರಿಗೆ ಮತ್ತೊಮ್ಮೆ ಜ್ಞಾಪಿಸಿ ಪತ್ರ ಬರೆದಿದ್ದೇವೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News