ಜ.5ರಂದು ಇಂಜಿನಿಯರಿಂಗ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆ

Update: 2019-12-11 13:42 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.11: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಇಂಜಿನಿಯರಿಂಗ್ ಸರ್ವಿಸಸ್ ಪ್ರಿಲಿಮಿನರಿ ಪರೀಕ್ಷೆ (ಇಎಸ್‌ಇ)ಯು ಮುಂದಿನ ವರ್ಷದ ಜನವರಿ 5ರಂದು ನಡೆಯಲಿದ್ದು,ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ಪ್ರವೇಶಪತ್ರಗಳನ್ನು ಲಭ್ಯವಾಗಿಸಲಾಗಿದೆ.

ಈ ವರ್ಷ ಸಿವಿಲ್,ಮೆಕ್ಯಾನಿಕಲ್,ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ವಿಭಾಗಗಳಲ್ಲಿ ವಿವಿಧ ಗ್ರುಪ್‌ಎ ಮತ್ತು ಗ್ರುಪ್ ಬಿ ಸೇವೆಗಳಲ್ಲಿ ಒಟ್ಟು 495 ಹುದ್ದೆಗಳನ್ನು ಪ್ರಕಟಿಸಲಾಗಿದೆ. ಪ್ರಿಲಿಮಿನರಿ,ಮುಖ್ಯ ಮತ್ತು ವ್ಯಕ್ತಿತ್ವ ಪರೀಕ್ಷೆಗಳ ಆಧಾರದಲ್ಲಿ ಇಂಜಿನಿಯರಿಂಗ್ ಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News