ತಾಜ್‌ಮಹಲ್ ಸುತ್ತಮುತ್ತ ನಿರ್ಮಾಣ, ಕೈಗಾರಿಕೆ ನಿಷೇಧ ರದ್ದು

Update: 2019-12-11 15:10 GMT

ಹೊಸದಿಲ್ಲಿ, ಡಿ. 11: ತಾಜ್ ಟ್ರೆಪೇಝಿಯಂ ವಲಯ (ಟಿಟಿಟಿ)ಯದಲ್ಲಿ ನಿರ್ಮಾಣ, ಕೈಗಾರಿಕೆ ಚಟುವಟಿಕೆ ಹಾಗೂ ಮರ ಕಡಿಯುವುದನ್ನು ಸಂಪೂರ್ಣ ನಿಷೇಧಿಸಿ ವಿಧಿಸಿದ್ದ ಈ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಹಿಂದೆ ತೆಗೆದುಕೊಂಡಿದೆ. ಮಾಲಿನ್ಯ ಹರಡದ ಕೈಗಾರಿಕೆ ಘಟಕ ಸ್ಥಾಪಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಆದರೆ, ನಿಯಮಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸಬೇಕು. ಪರಿಸರ ಸಚಿವಾಲಯದಿಂದ ನಿರಾಪೇಕ್ಷಣಾ ಪತ್ರವನ್ನು ಅದು ಪಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ, ಭಾರೀ ಕೈಗಾರಿಕೆಗಳ ಮೇಲಿನ ನಿಷೇಧ ಹಿಂದಿನಂತೆ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಾಜ್‌ಮಹಲ್, ಅದರ ಸುತ್ತ ಇರುವ ಸೂಕ್ಷ್ಮ ಪರಿಸರದ ಸಂರಕ್ಷಣೆ ಹಾಗೂ ತಾಜ್ ಮಹಲ್ ಸೇರಿದಂತೆ 4 ವಿಶ್ವ ಪಾರಂಪರಿಕ ನಿವೇಶನದ ಪರಿಸರ ಸೂಕ್ಷ್ಮ ಪ್ರದೇಶ ತ್ರಾಪೇಝಿಯಂ ವಲಯ (ಟಿಟಿಟ)ದಲ್ಲಿ ನಿರ್ಮಾಣದ ಕುರಿತು ಪರಿಸರವಾದಿ ಎಂ.ಸಿ. ಮೆಹ್ತಾ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News