ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Update: 2019-12-19 05:03 GMT

ಹೊಸದಿಲ್ಲಿ, ಡಿ.11: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಬುಧವಾರ ಅಂಗೀಕಾರ ಸಿಕ್ಕಿದೆ.

ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಪರ 125 ಮತಗಳು ಮತ್ತು ಮಸೂದೆ ವಿರುದ್ಧ 105 ಮತಗಳು ಬಿದ್ದವು. ಒಟ್ಟು 230 ಸದಸ್ಯರು ಹಾಜರಿದ್ದರು. 

ಬುಧವಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು, ಈ ಶಾಸನವು ಭಾರತದಲ್ಲಿ ಶಾಶ್ವತ ನಿವಾಸವಿಲ್ಲದೆ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.

"ಈ ಮಸೂದೆಯು ಕಿರುಕುಳಕ್ಕೊಳಗಾದವರಿಗೆ ಅವರ ಕುಟುಂಬಗಳಿಗೆ ಅವಕಾಶವನ್ನು ಒದಗಿಸುತ್ತದೆ. ದೇಶದ ಜನರು ಈ ಶಾಸನವನ್ನು ಬೆಂಬಲಿಸಿದ್ದಾರೆ" ಎಂದು ಅವರು ಅಭಿಪ್ರಾಯಪಟ್ಟರು.

"ನೀವು ಜಾರಿಗೆ ತಂದಿರುವ ಮಸೂದೆಯು ಭಾರತೀಯ ಸಂವಿಧಾನದ ಅಡಿಪಾಯದ ಮೇಲಿನ ಆಕ್ರಮಣವಾಗಿದೆ, ಇದು ಭಾರತದ ಗಣರಾಜ್ಯದ ಮೇಲಿನ ಆಕ್ರಮಣವಾಗಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ” ಎಂದು ಕಾಂಗ್ರೆಸ್ ನ ಆನಂದ್ ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News