ಭೂಮಿ ಪೆಡ್ನೇಕರ್ ಗೆಲುವು

Update: 2019-12-15 07:44 GMT

ಬಾಲಿವುಡ್‌ನ ಉದಯೋನ್ಮುಖ ತಾರೆಯರ ಪೈಕಿ ಭೂಮಿ ಪೆಡ್ನೇಕರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ವಿಶಿಷ್ಟವಾದ ಹಾಗೂ ಪ್ರಯೋಗಾತ್ಮಕವಾದ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಭೂಮಿ ಈವರೆಗೆ ಏಳು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದರಲ್ಲೂ ಒಂದು ವಿಶೇಷವಿದೆ. ಆಕೆ ನಟಿಸಿದ ಏಳು ಚಿತ್ರಗಳ ಪೈಕಿ ಆರು ಚಿತ್ರಗಳು ಸೂಪರ್‌ಹಿಟ್ ಆಗಿವೆ. ಅಷ್ಟೇ ಅಲ್ಲ, ಈ ಎಲ್ಲಾ ಚಿತ್ರಗಳಲ್ಲಿಯೂ ಆಕೆಯ ನಟಯು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮುಕ್ತಕಂಠದ ಪ್ರಶಂಸೆಗೊಳಗಾಗಿದೆ.

ಬಾಲಿವುಡ್‌ನಲ್ಲಿ ತನ್ನ ಬಾಕ್ಸ್ ಆಫೀಸ್ ಸಾಧನೆಯ ಬಗ್ಗೆ ಭೂಮಿಗೆ ತುಂಬಾ ಸಂತಸವಿದೆ. ‘‘ ಪ್ರೇಕ್ಷಕರನ್ನು ತಲುಪುವಂತಹ ಅದ್ಬುತವಾದ ಸ್ಕ್ರಿಪ್ಟ್‌ಗಳನ್ನು ಹೊಂದಿರುವ ಚಿತ್ರಗಳನ್ನು ನಟಿಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಬಂದ ಅದೃಷ್ಟವೆಂದು ಭೂಮಿ ಹೇಳಿಕೊಳ್ಳುತ್ತಾರೆ. ಕಲಾವಿದೆಯಾಗಿ ತಾನು ಪ್ರೇಕ್ಷಕರ ಮನದಲ್ಲಿ ಅವಿಸ್ಮರಣೀ ಯವಾಗಿ ಉಳಿಯಬಲ್ಲಂತಹ ಅಸಾಧಾರಣ ಕಥೆಗಳು ಹಾಗೂ ವಿಶಿಷ್ಟವಾದ ಪಾತ್ರಗಳಿಗಾಗಿ ಹುಡುಕಾಟ ನಡೆಸುತ್ತಲೇ ಬಂದಿರುವುದಾಗಿ ಭೂಮಿ ತನ್ನ ಯಶಸ್ಸಿನ ಗುಟ್ಟನ್ನು ಹೇಳಿಕೊಂಡಿದ್ದಾರೆ.

ಭೂಮಿ ಅಭಿನಯಿಸಿದ ಧಮ್ ಲಗಾಕೆ ಹೈಶಾ, ಟಾಯ್ಲೆಟ್ ಏಕ್ ಪ್ರೇಮ್‌ಕಥಾ,ಸಾಂಡ್ ಕಿ ಆಂಕ್ ನಿಂದ ಹಿಡಿದು ಇತ್ತೀಚೆಗೆ ತೆರೆಕಂಡ ಬಾಲಾ ಹಾಗೂ ಪತಿ,ಪತ್ನಿ ಔರ್ ವೊಹ್ ಚಿತ್ರಗಳು ಸೂಪರ್‌ಹಿಟ್ ಏನಿಸಿವೆ.ಸದ್ಯ ಭೂಮಿ ಭೂತ್ ಪಾರ್ಟ್ 1 ಹಾಗೂ ಡಾಲಿ,ಕಿಟ್ಟಿ ಔರ್ ಚಮ್ಕೆ ಸಿತಾರೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಗ್ಲಾಮರ್ ರಹಿತವಾದ ಪಾತ್ರಗಳಿಂದಲೇ ಪ್ರೇಕ್ಷಕರ ಮನಗೆದ್ದಿರುವ ಭೂಮಿ ಭವಿಷ್ಯದಲ್ಲಿ ಬಾಲಿವುಡ್‌ನ ನಂ.1 ತಾರಾಪಟ್ಟವನ್ನು ಅಲಂಕರಿಸಿದರೂ ಅಚ್ಚರಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News