ನೆಹರೂ ಬಗ್ಗೆ ಅವಹೇಳನಕಾರಿ ಹೇಳಿಕೆ: ನಟಿಯನ್ನು ವಶಕ್ಕೆ ಪಡೆದ ಪೊಲೀಸರು

Update: 2019-12-15 12:32 GMT

ಜೈಪುರ: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಬಗ್ಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಮಾಡೆಲ್ ಮತ್ತು ಚಿತ್ರನಟಿ ಪಾಯಲ್ ರೋಹಟ್ಗಿಯವರನ್ನು ರಾಜಸ್ಥಾನ ಪೊಲೀಸರು ರವಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಪಾಯಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬುಂಡಿ ಎಸ್ಪಿ ಮಮತಾ ಗುಪ್ತ ಎಎನ್‍ಐಗೆ ತಿಳಿಸಿದರು. ಪಾಯಲ್ ರೋಹಟ್ಗಿಯವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮೋತಿಲಾಲ್ ನೆಹರೂ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಫೇಸ್‍ ಬುಕ್‍ ನಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಮತ್ತು ಜವಾಹರಲಾಲ್ ನೆಹರೂ ಅವರ ಪತ್ನಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ 2019ರ ಅಕ್ಟೋಬರ್‍ನಲ್ಲಿ ಪಾಯಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಯುವ ಕಾಂಗ್ರೆಸ್ ಮುಖಂಡ ಚರ್ಮೇಶ್ ಶರ್ಮಾ ಈ ಸಂಬಂಧ ದೂರು ನೀಡಿದ್ದರು. ಐಟಿ ಕಾಯ್ದೆಯ ಸೆಕ್ಷನ್ 66 ಮತ್ತು 67ರ ಅನ್ವಯ ಪ್ರಕರಣ ದಾಖಲಾಗಿತ್ತು.

ಸೆಪ್ಟೆಂಬರ್ 21ರಂದು ಈ ವಿವಾದಾಸ್ಪದ ವಿಡಿಯೊ ಪೋಸ್ಟ್‍ಮಾಡಲಾಗಿದ್ದು, ಈ ದೃಶ್ಯಾವಳಿಯ ತುಣುಕಿನಲ್ಲಿರುವ ಅಂಶಗಳು ಭಾರತ ಹಾಗೂ ಇತರ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತರುವಂಥದ್ದು ಎಂದು ದೂರುದಾರರು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News