ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮ ಬಹಿಷ್ಕರಿಸಿದ 'ಸುಡಾನಿ ಫ್ರಂ ನೈಜೀರಿಯಾ' ಚಿತ್ರತಂಡ

Update: 2019-12-15 17:18 GMT

ಕೊಚ್ಚಿ: ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿಯನ್ನು ವಿರೋಧಿಸಿ ತಾನು ಮತ್ತು ಚಿತ್ರತಂಡ ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಮಲಯಾಳಂ ಚಿತ್ರ 'ಸುಡಾನಿ ಫ್ರಂ ನೈಜೀರಿಯಾ'ದ ನಿರ್ದೇಶಕ ಝಕರಿಯಾ ಮುಹಮ್ಮದ್ ಹೇಳಿದ್ದಾರೆ.

2018ರ ಅತ್ಯುತ್ತಮ ಮಲಯಾಳಂ ಚಿತ್ರಕ್ಕಾಗಿ 'ಸುಡಾನಿ ಫ್ರಂ ನೈಜೀರಿಯಾ' ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ.

"ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿಯನ್ನು ವಿರೋಧಿಸಿ ಸುಡಾನಿ ಫ್ರಂ ನೈಜೀರಿಯಾದ ನಿರ್ದೇಶಕನಾಗಿ ನಾನು ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮದಿಂದ ದೂರ ಸರಿಯುತ್ತೇವೆ. ಸ್ಕ್ರಿಪ್ಟ್ ರೈಟರ್ ಮುಹ್ಸಿನ್ ಪರಾರಿ ಮತ್ತು ಚಿತ್ರದ ನಿರ್ಮಾಪಕರೂ ನನ್ನ ಜೊತೆಗಿದ್ದಾರೆ" ಎಂದು ಝಕರಿಯಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ವಾರ ಸೂಪರ್ ಹಿಟ್ ಮಲಯಾಳಂ ಚಿತ್ರ 'ಉಂಡಾ' ಚಿತ್ರತಂಡ ಎನ್ ಆರ್ ಸಿ ಮತ್ತು ಪೌರತ್ವ ಕಾಯ್ದೆ ವಿರುದ್ಧ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ಯಾನರ್ ಗಳನ್ನು ಪ್ರದರ್ಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News