ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿಡಿಯೋಗೆ ಲೈಕ್ ಒತ್ತಿದ ಅಕ್ಷಯ್ ಕುಮಾರ್: ತೀವ್ರ ಟೀಕೆಯ ನಂತರ ಸ್ಪಷ್ಟನೆ

Update: 2019-12-19 08:55 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲಿನ ದೌರ್ಜನಕ್ಕೆ ಸಂಬಂಧಿಸಿದಂತೆ, ಹಿಂಸೆಯನ್ನು ಪ್ರೋತ್ಸಾಹಿಸುವ ಟ್ವೀಟ್ ಅನ್ನು "ಪ್ರಮಾದವಶಾತ್ ಲೈಕ್" ಮಾಡಿದ್ದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್ ನಟನ ಈ ಲೈಕ್ ನಿಂದ ಟ್ವಿಟರ್ ಬಳಕೆದಾರರು ಆಘಾತಕ್ಕೀಡಾಗಿದ್ದರು ಮತ್ತು ಇದನ್ನು ಖಂಡಿಸಿದ್ದರು.

"ಅದು ನನ್ನಿಂದಾದ ತಪ್ಪು. ಅಂಥ ಕೃತ್ಯವನ್ನು ಬೆಂಬಲಿಸುವುದಿಲ್ಲ" ಎಂದು ಅಕ್ಷಯ್ ಸ್ಪಷ್ಟನೆ ನೀಡಿದ್ದಾರೆ.

"ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಟ್ವೀಟ್‍ ಗೆ ಪ್ರಮಾದವಶಾತ್ ಲೈಕ್ ಒತ್ತಿದ್ದೆ. ನಾನು ಮೇಲೆ ನೋಡುತ್ತಿದ್ದಾಗ ಆಕಸ್ಮಿಕವಾಗಿ ಲೈಕ್ ಗುಂಡಿ ಒತ್ತಲ್ಪಟ್ಟಿರಬೇಕು. ನನ್ನ ಗಮನಕ್ಕೆ ಅದು ಬಂದ ತಕ್ಷಣ ನಾನು ಅನ್‍ ಲೈಕ್ ಮಾಡಿದ್ದೇನೆ. ಅಂಥ ಕೃತ್ಯಗಳನ್ನು ಯಾವುದೇ ಕಾರಣಕ್ಕೆ ಬೆಂಬಲಿಸುವುದಿಲ್ಲ" ಎಂದು ಹೇಳಿದ್ದಾರೆ.

ಜಾಮಿಯಾಗೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಶೀರ್ಷಿಕೆಯಿದ್ದ ಟ್ವೀಟ್ ನಲ್ಲಿ ಜಾಮಿಯಾ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋಗೆ ಅಕ್ಷಯ್ ಲೈಕ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News