ಮಹಿಳೆಯರು ಪುರುಷರಿಗಿಂತ ಉತ್ತಮ ಆಡಳಿತಗಾರರು: ಒಬಾಮ

Update: 2019-12-16 17:22 GMT

ಸಿಂಗಾಪುರ, ಡಿ. 16: ಜಗತ್ತಿನ ಎಲ್ಲ ದೇಶಗಳನ್ನು ಮಹಿಳೆಯರೇ ನಡೆಸಿದರೆ, ಅಲ್ಲಿನ ಜನರ ಜೀವನ ಮಟ್ಟ ಮತ್ತು ದೇಶಗಳ ನಿರ್ವಹಣೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೋಮವಾರ ಹೇಳಿದ್ದಾರೆ.

ಸಿಂಗಾಪುರದಲ್ಲಿ ನಡೆದ ನಾಯಕತ್ವಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಮಹಿಳೆಯರೇ ನಡೆಸುವ ಜಗತ್ತು ಹೇಗೆ ಇರಬಹುದು ಎಂದು ಅಚ್ಚರಿಪಟ್ಟಿದ್ದೆ ಎಂದರು.

ಮಹಿಳೆಯರು ಪರಿಪೂರ್ಣರಲ್ಲದಿದ್ದರೂ, ಪುರುಷರಿಗಿಂತ ಉತ್ತಮ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ನುಡಿದರು. ಇಂದಿನ ಜಗತ್ತಿನ ಹೆಚ್ಚಿನ ಸಮಸ್ಯೆಗಳು ಅಧಿಕಾರಕ್ಕೆ ಅಂಟಿಕೊಂಡಿರುವ ಮುದುಕರಿಂದಾಗಿ ಹುಟ್ಟಿಕೊಂಡಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News