×
Ad

ಮುಖ ಗುರುತು ತಂತ್ರಜ್ಞಾನದಲ್ಲಿ ಜನಾಂಗೀಯ ತಾರತಮ್ಯ: ಅಮೆರಿಕ ಸಂಸ್ಥೆಯ ಅಧ್ಯಯನದಲ್ಲಿ ಬಹಿರಂಗ

Update: 2019-12-20 21:53 IST

ವಾಶಿಂಗ್ಟನ್, ಡಿ. 20: ಹೆಚ್ಚಿನ ಮುಖ ಗುರುತು ವ್ಯವಸ್ಥೆಗಳು ಬಿಳಿಯೇತರರನ್ನು ಬಿಳಿಯರಿಗಿಂತ ಹೆಚ್ಚು ಬಾರಿ ತಪ್ಪಾಗಿ ಗುರುತಿಸುತ್ತವೆ ಎಂದು ಗುರುವಾರ ಬಿಡುಗಡೆಗೊಂಡ ಅಮೆರಿಕ ಸರಕಾರದ ಅಧ್ಯಯನವೊಂದು ತಿಳಿಸಿದೆ. ಇದು ಕಾನೂನು ಅನುಷ್ಠಾನ ಸಂಸ್ಥೆಗಳು ವ್ಯಾಪಕವಾಗಿ ಬಳಸುತ್ತಿರುವ ಮುಖ ಗುರುತು ತಂತ್ರಜ್ಞಾನದ ಕುರಿತ ಸಂದೇಹಗಳನ್ನು ಹೆಚ್ಚಿಸಲಿದೆ.

‘ವನ್-ಟು-ವನ್’ ಹೊಂದಾಣಿಕೆ ಎಂಬ ನಿರ್ದಿಷ್ಟ ಮಾದರಿಯ ಮಾಹಿತಿಕೋಶದ ಶೋಧದ ವೇಳೆ, ಹೆಚ್ಚಿನ ಮುಖ ಗುರುತು ತಂತ್ರಜ್ಞಾನಗಳು ಕಾಕೇಶಿಯನ್ (ಬಿಳಿಯರು) ಮುಖಗಳಿಗಿಂತ ಆಫ್ರಿಕನ್-ಅಮೆರಿಕನ್ ಮತ್ತು ಏಶ್ಯನ್ ಮುಖಗಳನ್ನು 10ರಿಂದ 100 ಪಾಲು ಹೆಚ್ಚು ತಪ್ಪಾಗಿ ಗುರುತಿಸುತ್ತದೆ ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆ್ಯಂಡ್ ಟೆಕ್ನಾಲಜಿ (ಎನ್‌ಐಎಸ್‌ಟಿ) ನಡೆಸಿದ ಅಧ್ಯಯನ ಹೇಳಿದೆ.

‘ವನ್-ಟು-ವನ್’ ಹೊಂದಾಣಿಕೆಯಲ್ಲಿ ಆಫ್ರಿಕನ್-ಅಮೆರಿಕನ್ ಮಹಿಳೆಯರು ತಪ್ಪಾಗಿ ಗುರುತಿಸಲ್ಪಡುವ ಸಾಧ್ಯತೆಗಳು ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News