ಭೀಕರ ಬೆಂಕಿ ದುರಂತ: 9 ಮಂದಿ ಸಜೀವ ದಹನ
Update: 2019-12-23 07:33 IST
ಹೊಸದಿಲ್ಲಿ: ಇಲ್ಲಿನ ಕಿರಾಣಿ ಪ್ರದೇಶದಲ್ಲಿ ಬಟ್ಟೆ ಗೋದಾಮಿಗೆ ಸೋಮವಾರ ನಸುಕಿನಲ್ಲಿ ಬೆಂಕಿ ಬಿದ್ದು ಉಂಟಾದ ದುರಂತದಲ್ಲಿ ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ. ಇತರ 10 ಮಂದಿಗೆ ತೀವ್ರ ಸುಟ್ಟಗಾಯಗಳಾಗಿವೆ.
ಬೆಂಕಿಯನ್ನು ನಂದಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ತಿಂಗಳ ಆರಂಭದಲ್ಲಿ ಅಜನ್ ಮಂಡಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಇಂಥದ್ದೇ ಭೀಕರ ಬೆಂಕಿ ದುರಂತದಲ್ಲಿ 43 ಮಂದಿ ಬಲಿಯಾಗಿದ್ದರು.