ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರಳ ಬಹುಮತ

Update: 2019-12-23 06:43 GMT

ರಾಂಚಿ, ಡಿ.23: ಝಾರ್ಖಂಡ್ ವಿಧಾನ ಸಭೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು,  ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ ಮೈತ್ರಿಕೂಟವು ಮೇಲುಗೈ ಸಾಧಿಸಿದ್ದು, ಬಹುಮತ ಗಳಿಸಲು 41 ಸ್ಥಾನ ಗಳಿಸಬೇಕಾಗಿದೆ.

ಕಾಂಗ್ರೆಸ್ ಮೈತ್ರಿಕೂಟ 42ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರಳ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಂಡು ಬಂದಿದೆ

ಬಿಜೆಪಿ ಮೇಲೆ ತನ್ನ ಮುನ್ನಡೆಯನ್ನು ವಿಸ್ತರಿಸಿದೆ.  ಸುದೇಶ್ ಮಹತೋ ನೇತೃತ್ವದ ಆಲ್ ಝಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು)   ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ್)  ಪ್ರಬಲ ಪೈಪೋಟಿ ನೀಡಿದೆ.

81 ಸ್ಥಾನಗಳ ಪೈಕಿ ಬಿಜೆಪಿ 29, ಕಾಂಗ್ರೆಸ್ ಮೈತ್ರಿಕೂಟ 42, ಎಜೆಎಸ್‌ಯು  3 ಮತ್ತು ಇತರ 7 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಜಮ್ಶೆಡ್ಪುರ ಪೂರ್ವ ಕ್ಷೇತ್ರದ ಅಭ್ಯರ್ಥಿ ರಘುಬರ್ ದಾಸ್  ಮುನ್ನಡೆ ಸಾಧಿಸಿದ್ದಾರೆ.

ಮಾಜಿ ಮುಖ್ಯ ಮಂತ್ರಿ ಜೆಎಂಎಂ ಅಭ್ಯರ್ಥಿ ಹೇಮಂತ್ ಸೊರೇನ್ ಅವರು ಬರ್ ಹೇತ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ  ದುಮ್ಕಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News