ಜಾರ್ಖಂಡ್ ಸಿಎಂ ರಘುಬರ್ ದಾಸ್ ಗೆ ಹಿನ್ನಡೆ
ರಾಂಚಿ, ಡಿ.23: ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ರಘುಬರ್ ದಾಸ್ ಅವರು ಜಮ್ಶೆಡ್ಪುರ (ಪೂರ್ವ) ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿ ಸರಾಯು ರಾಯ್ ಅವರ ಎದುರು ಸೋಲಿನ ಭೀತಿ ಎದುರಿಸುತ್ತಿದ್ದಾರೆ.
ಜಾರ್ಖಂಡ್ ಸಿಎಂ ರಘುಬರ್ ದಾಸ್ ಅವರು ಸ್ವತಂತ್ರ ಅಭ್ಯರ್ಥಿಯ ಎದುರು 771 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಬಂಡಾಯ ಮತ್ತು ಸ್ವತಂತ್ರ ಅಭ್ಯರ್ಥಿ ಸರಾಯು ರಾಯ್ ಇದುವರೆಗೆ 14,479 ಮತಗಳನ್ನು ಗಳಿಸಿದರೆ, ರಘುಬರ್ ದಾಸ್ 13,708 ಮತಗಳನ್ನು ಪಡೆದಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ರಘುಬರ್ ದಾಸ್ ತಮ್ಮ ಜಮ್ಶೆಡ್ಪುರ ಪೂರ್ವ ಕ್ಷೇತ್ರದಿಂದ ಸತತ ಆರನೇ ಅವಧಿಗೆ ವಿಧಾನಸಭೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. 2014 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ದಾಸ್ ಸುಮಾರು 70,000 ಮತಗಳಿಂದ ಜಮ್ಶೆಡ್ಪುರ ಪೂರ್ವ ಕ್ಷೇತ್ರದಲ್ಲಿ ಜಯ ಗಳಿಸಿದ್ದರು.
64 ವರ್ಷದ ಬಿಜೆಪಿ ನಾಯಕ ರಘುಬರ್ ದಾಸ್ ಅವರು ಮತ್ತೊಮ್ಮೆ ಮುಖ್ಯ ಮಂತ್ರಿಯಾಗುವ ಯೋಜನೆಯೊಂದಿಗೆ ಕಣದಲ್ಲಿದ್ದಾರೆ. ಕಳೆದ 19 ವರ್ಷಗಳಲ್ಲಿ ಜಾರ್ಖಂಡ್ ಸಿಎಂ ಯಾರೂ ಕೂಡಾ ಸತತ ಎರಡನೇ ಅವಧಿಗೆ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಉಳಿಸಿಕೊಂಡಿಲ್ಲ.